ಪ್ರಕೃತಿಯ ಕುತೂಹಲಕಾರಿ ಜೀವಿಗಳ ಅದ್ಭುತ ನೋಟ: ದೈತ್ಯ ಜೀವಿಗಳ ಅಚ್ಚರಿಯ ಸಂಗತಿ
ಪ್ರಕೃತಿ ಪ್ರಿಯರು ಯಾವಾಗಲೂ ಅನ್ವೇಷಣೆಯಲ್ಲಿರುತ್ತಾರೆ. ಹಾಗೆಯೇ ವಿಶಿಷ್ಟ ಚಿತ್ರಗಳನ್ನು ಕಂಡರೆ ಅಚ್ಚರಿಗೀಡಾಗುತ್ತಾರೆ. ನಾವು ಈ ಪ್ರಕೃತಿ ಬಗ್ಗೆ ಎಷ್ಟು ತಿಳಿದುಕೊಂಡರೂ, ಮತ್ತೆ ಅಷ್ಟೇ ವಿಚಾರಗಳು ನಾವು ತಿಳಿದುಕೊಳ್ಳಲು ಇವೆ ಎನ್ನುವ ಸತ್ಯ ನಮ್ಮನ್ನು ಅಚ್ಚರಿಗೀಡು ಮಾಡಬಹುದು.
ಇಲ್ಲಿ ಒಂದಿಷ್ಟು ರೋಮಾಂಚನಕಾರಿ ವಿಚಾರಗಳೊಂದಿಗೆ ನಿಮ್ಮನ್ನು ಆಶ್ಚರ್ಯ ಚಕಿತರನ್ನಾಗಿಸುವ ಚಿತ್ರ ವಿವರಣೆಗಳನ್ನು ನೀಡಲಾಗಿದೆ. ಇವುಗಳಲ್ಲಿ ಕೆಲವು ಖ್ಯಾತ ಫೋಟೋ ಗ್ರಾಫರ್ ಗಳು ಕ್ಲಿಕ್ಕಿಸಿರುವ ಅಪರೂಪದ ಫೋಟೋಗಳೂ, ವಿವರಣೆಗಳೂ ಇವೆ.
ಬೇಬಿ ಅಲಿಗೇಟರ್ ಸ್ನ್ಯಾಪಿಂಗ್ ಆಮೆ
ನೋಡಲು ಡೈನೋಸರ್ ನ್ನು ಹೋಲುವ ಬೇಬಿ ಅಲಿಗೇಟರ್ ಸ್ನ್ಯಾಪಿಂಗ್ ಆಮೆ, ಸುಮಾರು 200 ವರ್ಷಗಳ ವರೆಗೆ ಬದುಕಬಲ್ಲದು. ಚಿಕಾಗೋದಲ್ಲಿನ ಶೆಡ್ ಅಕ್ವೇರಿಯಂ ಇಂತಹ ಆಮೆಗಳನ್ನು ಸಾಕುವಲ್ಲಿ ದಾಖಲೆ ಸೃಷ್ಟಿಸಲಾಗದೆ.
ಅಪರೂಪದ ಐರಾವಡ್ಡಿ ಡಾಲ್ಫಿನ್
ಆಗ್ನೇಯ ಏಷ್ಯಾದಲ್ಲಿ ಮತ್ತು ಬಂಗಾಳ ಕೊಲ್ಲಿಯ ಸುತ್ತಲೂ ಕಂಡುಬರುವ ಅಪರೂಪದ ಐರಾವಡ್ಡಿ ಡಾಲ್ಫಿನ್ 30 ವರ್ಷಗಳ ವರೆಗೆ ಬದುಕಬಲ್ಲದು. ಇದು ಬಹಳ ಅಪರೂಪದ ತಳಿಯಾಗಿದ್ದು, ಜಗತ್ತಿನಲ್ಲಿ ಇವುಗಳ ಸಂಖ್ಯೆ ಕೇವಲ 92 ಮಾತ್ರವೇ ಇದೆ.
ಇದು ಸಿಹಿ ನೀರು ಹಾಗೂ ಉಪ್ಪು ನೀರು ಎರಡರಲ್ಲೂ ವಾಸಿಸುವ ಸಾಮರ್ಥ್ಯವನ್ನು ಹೊಂದಿದೆ. ಸುಮಾರು 8 ಅಡಿಗಳಷ್ಟು ಉದ್ದ ಬೆಳೆಯುತ್ತದೆ. 400 ಪೌಂಡ್ ತೂಕ ಇರುತ್ತದೆ. ಮೀನುಗಳು ಮತ್ತು ಸೆಫಲೋಪಾಡ್ ಗಳನ್ನು ಇವು ತಿಂದು ಬದುಕುತ್ತವೆ. ಇವುಗಳು ಅತೀ ನಿಧಾನವಾಗಿ ಈಜುವ ಡಾಲ್ಫಿನ್ ಗಳಾಗಿವೆ.
ವಿಶ್ವದ ಅತಿ ದೊಡ್ಡ ಹದ್ದು
ಹಾರ್ಪಿ ಹದ್ದಿನ ಬಗ್ಗೆ ನೀವು ಕೇಳಿದ್ದೀರಾ? ಇದು ವಿಶ್ವದ ಅತೀ ದೊಡ್ಡ ಹದ್ದು. ದಕ್ಷಿಣ ಅಮೆರಿಕಾದಲ್ಲಿ ಇವುಗಳು ಸಾಮಾನ್ಯವಾಗಿ ಕಂಡು ಬರುವ ತಳಿಗಳಾಗಿವೆ. ಇದು ತನ್ನ ರೆಕ್ಕೆಯನ್ನು ಹರಡಿದರೆ, ಆರು ಅಡಿಗಳಷ್ಟು ಉದ್ದ ಇದರ ರೆಕ್ಕೆಯೇ ಇದೆ.
ಜಿಂಕೆಗಳು, ಕೋತಿಗಳು ಕೂಡ ಈ ಹದ್ದನ್ನು ಕಂಡರೆ ಹೆದರಿ ಸ್ಥಳದಿಂದ ಓಡಿಹೋಗುತ್ತವೆ. ಈ ಹದ್ದಿನ ಗಾತ್ರದ ಯಾವುದೇ ಪ್ರಾಣಿಯನ್ನು ಇದು ಎತ್ತಿಕೊಂಡು ಹೋಗಿ ತಿನ್ನುತ್ತದೆ.
ಕೂದಲು ರಹಿತ ಚಿಂಪಾಂಚಿ
ಇದು ಕೂದಲು ರಹಿತ ಚಿಂಪಾಂಚಿಯಾಗಿದೆ. ಸಾಮಾನ್ಯವಾಗಿ ಚಿಂಪಾಂಚಿಗಳು ಕೂದಲು ಹೊಂದಿರುತ್ತವೆ. ಆದರೆ, ಈ ಚಿಂಪಾಂಚಿ ವಿಭಿನ್ನವಾಗಿದೆ. ಮನುಷ್ಯರು ಜಿಮ್ ಗೆ ಹೋಗಿ ಸ್ನಾಯುಗಳನ್ನು ಬೆಳೆಸಿದಂತೆ ಇದರ ಕೈಕಾಲುಗಳು ಕಂಡು ಬರುತ್ತವೆ.
ಈ ಚಿಂಪಾಂಚಿ ಕೂದಲು ಕಳೆದುಕೊಳ್ಳಲು ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಆದರೆ ಈ ತಳಿಯ ಚಿಂಪಾಂಚಿಗಳು ಗುಂಪಿನಲ್ಲಿ ವಾಸಿಸುತ್ತವೆ. 15ರಿಂದ 150 ಸದಸ್ಯರ ಗುಂಪು ಒಟ್ಟಾಗಿ ಜೀವಿಸುತ್ತವೆ. ಮನುಷ್ಯನಿಗಿಂತ ಇದು 5 ಪಟ್ಟು ಹೆಚ್ಚು ಶಕ್ತಿಶಾಲಿ ಪ್ರಾಣಿಯಾಗಿದೆ.
ಮಿಂಚು ಬಡಿದ ಮರ
ಈ ಮರಕ್ಕೆ ಮಿಂಚು ಹೊಡೆದ ತಕ್ಷಣವೇ ಫೋಟೋ ಕ್ಲಿಕ್ಕಿಸಲಾಗಿದೆ. ಮರಕ್ಕೆ ಮಿಂಚು ಹೊಡೆದ ತಕ್ಷಣವೇ ಮರ ಸೀಳಿ ಹೋಗಿದ್ದು, ಮರದ ಒಳಗೆ ಬೆಂಕಿ ಪ್ರಕಾಶಮಾನವಾಗಿ ಹೊತ್ತಿ ಉರಿಯುತ್ತಿದೆ. ಮಿಂಚಿನಿಂದ ಬೂದಿಯಾಗದ ಮರ, ಹೊತ್ತಿ ಉರಿಯುತ್ತಲೇ ಇರುವುದು ಅಚ್ಚರಿಯಾಗಿರುವಂತಹದ್ದು.
ಬೇಬಿ ಗೊರಿಲ್ಲಾ ಮತ್ತು ಬೇಬಿ ಚಿಂಪಾಂಚಿ ಆಟ
ಗೊರಿಲ್ಲಾ ಮತ್ತು ಚಿಂಪಾಂಚಿ ಮರಿಗಳು ಸೌಹಾರ್ದಯುತವಾಗಿ ಆಟವಾಡುತ್ತಿರುವ ಅಪರೂಪದ ಚಿತ್ರ ಇದಾಗಿದ್ದು, ಈ ಚಿತ್ರವನ್ನು ಖ್ಯಾತ ಛಾಯಾಗ್ರಾಹಕ ಮೈಕೆಲ್ ಪೋಲಿಜಾ ಅವರು ಕ್ಲಿಕ್ಕಿಸಿದ್ದಾರೆ.
ಸಾಮಾನ್ಯವಾಗಿ ಗೊರಿಲ್ಲಾ ಮತ್ತು ಚಿಂಪಾಂಚಿಗಳು ಒಂದಕ್ಕೊಂದು ವಿರುದ್ಧ ಸ್ವಭಾವವಿರುವ ಪ್ರಾಣಿಗಳಾಗಿವೆ. ಗೊರಿಲ್ಲಾಗಳು ಬೇರೆ ಪ್ರಾಣಿಗಳ ಮೇಲೆ ಆಕ್ರಮಣಕಾರಿಯಾಗಿವೆ. ಆದರೆ ಇಲ್ಲಿ ಗೊರಿಲ್ಲಾ ಮತ್ತು ಚಿಂಪಾಂಚಿ ಮರಿಗಳು ಸೌಹಾರ್ದಯುತವಾಗಿವೆ.
ಗೊರಿಲ್ಲಾಗಳು ಚಿಂಪಾಂಚಿಗಳಿಂತ ದೊಡ್ಡ ಗಾತ್ರವನ್ನು ಹೊಂದಿದೆ. ಮಾತ್ರವಲ್ಲದೇ ಗೊರಿಲ್ಲಾ ಕೈಗೆ ಸಿಕ್ಕಿದ್ದೆಲ್ಲ ನಾಶ ಮಾಡುವ ಆಕ್ರಮಣಕಾರಿ ಪ್ರಾಣಿಯಾಗಿದ್ದು, ಅತ್ಯಂತ ಧೈರ್ಯಶಾಲಿ ಪ್ರಾಣಿಯಾಗಿವೆ. ಆದರೆ, ಚಿಂಪಾಂಚಿ ಅಂಜುಬುರುಕ ಪ್ರಾನಿಯಾಗಿದ್ದು, ಗಾತ್ರದಲ್ಲಿಯೂ ಚಿಕ್ಕದಾಗಿರುತ್ತದೆ.
ಗೊರಿಲ್ಲಾಕ್ಕೆ ಯಾವುದೇ ರೀತಿಯಲ್ಲಿ ಚಿಂಪಾಂಚಿ ಸರಿಸಾಟಿಯಾಗಲಾರದು. ಶಕ್ತಿಯಲ್ಲಿಯೂ ಚಿಂಪಾಂಚಿಗಿಂತ ಗೊರಿಲ್ಲಾ ಭಾರೀ ಬಲ ಹೊಂದಿವೆ.
ಹವಾಯಿಯನ್ ಕಾಡಿನಲ್ಲಿ ನೀರಿನಂತೆ ಹರಿಯುವ ಲಾವಾ ರಸ
ಇದು ಹವಾಯಿಯನ್ ಕಾಡಿನ ಭೀಕರ ದೃಶ್ಯವಾಗಿದ್ದು, ಇಲ್ಲಿ ನೀರಿನ ಬದಲು ಬೆಂಕಿಯ ನೀರು, ಅಂದರೆ, ಲಾವಾ ರಸ ಉಕ್ಕಿ ಹರಿಯುತ್ತದೆ. ನೋಡಲು ಸುಂದರವಾಗಿ ಕಂಡರೂ ಅಷ್ಟೇ ಭೀಕರವಾಗಿದೆ.
ಒಂದು ಶತಮಾನದಲ್ಲಿ ಇಲ್ಲಿ 50 ಬಾರಿ ಸ್ಫೋಟಗೊಂಡಿದೆ. 2008 ಮತ್ತು 2018ರ ನಡುವೆ ಇಲ್ಲಿ ಭಾರೀ ಸ್ಫೋಟಗೊಂಡಿದ್ದು, ಪರಿಣಾಮವಾಗಿ ನೆರೆಯ ಎರಡು ಪಟ್ಟಣಗಳು ಬೆಂಕಿಗೆ ಕರಗಿ ಹೋಗಿದ್ದು, ಅಲ್ಲಿ ರಕ್ಷಿಸಲು ಅಂತ ಏನೂ ಉಳಿದಿಲ್ಲವಂತೆ!
ಲೈಟ್ ಹೌಸ್ ಅನ್ನು ನುಂಗುವ ಬೃಹತ್ ಅಲೆ
ಈ ಚಿತ್ರವಲ್ಲಿ 1989ರಲ್ಲಿ ಉತ್ತರ ಫ್ರಾನ್ಸ್ ನ ಹೊರಗೆ ಜೀನ್ ಗೈಚರ್ಡ್ ಎಂಬವರು ಸೆರೆ ಹಿಡಿದಿದ್ದಾರೆ. ದೈತ್ಯ ಅಲೆಯೊಂದು ಲೈಟ್ ಹೌಸ್ ನ್ನು ನುಂಗುತ್ತಿರುವಂತೆ ಈ ಫೋಟೋ ಕಂಡು ಬರುತ್ತಿದೆ. ಈ ಫೋಟೋ ತೆಗೆಯುವ ಸಂದರ್ಭದಲ್ಲಿ ಈ ಲೈಟ್ ಹೌಸ್ ಅಪಾಯಕಾರಿಯಾಗಿತ್ತು.
ತೀವ್ರ ಅಲೆಗಳ ಅಬ್ಬರದ ಜೊತೆಗೆ ತೀವ್ರ ಹವಾಮಾನ ವೈಪರಿತ್ಯವೂ ಇತ್ತು. ಇಂತಹ ಸಂದರ್ಭದಲ್ಲಿ ಹೆಲಿಕಾಫ್ಟರ್ ನ್ನು ಬಳಸಿ ಜೀನ್ ಗೈಚರ್ಡ್ ಅವರು ಚಿತ್ರವನ್ನು ತೆಗೆದಿದ್ದು, ಚಿತ್ರ ತೆಗೆಯುತ್ತಿದ್ದ ವೇಳೆ ವ್ಯಕ್ತಿಯೋರ್ವ ಲೈಟ್ ಹೌಸ್ ನಲ್ಲಿರುವುದು ಕಾಣಬಹುದಾಗಿದೆ.
ನಮ್ಮ ನಡುವೆ ಇನ್ನೂ ಇವೆ ಡೈನೋಸರ್ ಗಳು!
ಶತಕೋಟಿ ವರ್ಷಗಳ ಹಿಂದೆ ಪ್ರಕೃತಿ ವಿಕೋಪಗಳಿಂದ ನಾಶವಾದವು ಎಂದು ನಂಬಲಾಗಿರುವ ದೈತ್ಯ ಡೈನೋಸರ್ ಗಳ ವಂಶಾವಳಿಗಳು ಇನ್ನೂ ಇವೆ ಎನ್ನಲಾಗುತ್ತಿದೆ.
ಹಾರುವ ಮತ್ತು ಮಾಂಸ ತಿನ್ನುವ ಥೆರೋಪಾಡ್ಸ್ ಡೈನೋಸರ್ ಗಳ ವಿಕಸನಗೊಂಡ ಹಕ್ಕಿ ಎನ್ನಲಾಗುತ್ತಿರುವ ಹಕ್ಕಿಯು ಈ ಚಿತ್ರದಲ್ಲಿದೆ. ಇದು ಹಳೆಯ ಟೈರನ್ನೊಸಾರಸ್ ರೆಕ್ಸ್ ನ ಒಡ ಹುಟ್ಟಿದ ತಳಿಗಳು ಎಂದು ಭಾವಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka