ಕಳೆದ 30 ವರ್ಷಗಳಿಂದ ಯುಎಇಯಲ್ಲಿ ಜನನ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಕುಸಿತ; ವಿಶ್ವಸಂಸ್ಥೆಯ ವರದಿ
ಕಳೆದ 30 ವರ್ಷಗಳಿಂದ ಯುಎಇಯಲ್ಲಿ ಜನನ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಕುಸಿದಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. 2024ರ ವರ್ಲ್ಡ್ ಫೆರ್ಟಿಲಿಟಿ ರಿಪೋರ್ಟ್ ನ ಪ್ರಕಾರ ಯುಎ ಯಿಯ ಓರ್ವ ಮಹಿಳೆ ಪ್ರಸವಿಸುವ ಸಾಧ್ಯತೆ 1994ರಲ್ಲಿ 3.76 ಆಗಿದ್ದರೆ 2024ರಲ್ಲಿ ಇದು 1.21 ಆಗಿ ಕುಸಿದಿದೆ ಎಂದು ವರದಿ ತಿಳಿಸಿದೆ. ಆದರೆ ಮುಂದಿನ ಮೂರು ದಶಕಗಳಲ್ಲಿ ಈ ಜನನ ಪ್ರಮಾಣದಲ್ಲಿ ವೃದ್ಧಿಯಾಗಲಿದೆ ಎಂದೂ ವರದಿ ಹೇಳಿದೆ.
ಇದೆ ವೇಳೆ 2054ರ ವೇಳೆಗೆ ಯುಎಇ ಯ ಪ್ರತಿ ಮಹಿಳೆಯಜನನ ಅನುಪಾತವು 1.34 ಆಗಿ ವೃದ್ಧಿಯಾಗಲಿದೆ ಎಂದು ತಿಳಿದು ಬಂದಿದೆ. ಹಾಗೆಯೇ ಜನನ ಪ್ರಮಾಣವನ್ನು ವೃದ್ಧಿಗೊಳಿಸುವುದಕ್ಕೆ ಯು ಎ ಇ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಮದುವೆಗೆ ಪ್ರೋತ್ಸಾಹಿಸುವುದು, ಕುಟುಂಬಗಳನ್ನು ಶಕ್ತಿಗೊಳಿಸುವುದು, ಪತಿ ಪತ್ನಿಯರ ನಡುವೆ ಐಕ್ಯತೆಗೆ ಬಲ ನೀಡುವುದು ಮುಂತಾದ ಕ್ರಮಗಳ ಮೂಲಕ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಇದೇ ವೇಳೆ ಇಂತಹ ಸಮಸ್ಯೆ ಜಿಸಿಸಿ ರಾಷ್ಟ್ರಗಳ ಉದ್ದಕ್ಕೂ ಇದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
1994 ರಲ್ಲಿ ಸೌದಿ ಅರೇಬಿಯಾದಲ್ಲಿ ಜನನ ಪ್ರಮಾಣವು 5.16 ಆಗಿತ್ತು. 2024ರಲ್ಲಿ ಇದು 2.3 ಕ್ಕೆ ಕುಸಿದಿದೆ. ಮುಂದಿನ ಮೂರು ದಶಕಗಳಲ್ಲಿ ಇದು 1.85 ಆಗಿ ಕುಸಿಯಲಿದೆ ಎಂದು ಕೂಡ ಅಂದಾಜಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj