ಮೊದಲ ಮತದಾನ ಮಾಡಿ ಹಸೆ ಮಣೆ ಏರಿದ ಮದುಮಗಳು
26/04/2024
ಚಿಕ್ಕಮಗಳೂರು: ಹಸೆ ಮಣೆ ಏರುವ ಮುನ್ನ ಮದುಮಗಳು ಮೊದಲ ಮತದಾನ ಮಾಡಿ ನಂತರ ಹಸೆಮಣೆ ಏರಲು ಹೋಗಿರುವ ಘಟನೆ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.
ತಳವಾರ ಗ್ರಾಮದ ಸೌಮ್ಯ ಮದುವೆಗೂ ಮುನ್ನ ಮತದಾನ ಮಾಡಿದ ನವವಧುವಾಗಿದ್ದಾರೆ. ಇವರು ಬೂತ್ ನಂಬರ್ 86ರಲ್ಲಿ ಮೊದಲ ಮತದಾನ ಮಾಡಿದ್ದಾರೆ. ಮತ ಹಾಕಿ ಕುಂದೂರಿನಿಂದ 20 ಕಿ.ಮೀ. ದೂರದ ಮದುವೆ ಮಂಟಪಕ್ಕೆ ಆಗಮಿಸಿದ್ದಾರೆ.
ಮಧುಮಗಳ ಜೊತೆ ಕುಟುಂಬದ 11 ಜನರೂ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಕೊಪ್ಪ ತಾಲೂಕಿನ ಯುವಕನೊಂದಿಗೆ ಸೌಮ್ಯಳ ಮದುವೆ ನಿಶ್ಚಯವಾಗಿತ್ತು.ಮೂಡಿಗೆರೆ ತಾಲೂಕಿನ ಪ್ರೀತಂ ಹಾಲ್ ನಲ್ಲಿ ಮದುವೆ ಇಂದು ಮದುವೆ ನಡೆಯಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth