ಹೃದಯಾಘಾತವಾದರೂ 40 ಜನರ ಪ್ರಾಣ ಉಳಿಸಿದ ಬಸ್ ಚಾಲಕ - Mahanayaka
10:30 AM Thursday 12 - December 2024

ಹೃದಯಾಘಾತವಾದರೂ 40 ಜನರ ಪ್ರಾಣ ಉಳಿಸಿದ ಬಸ್ ಚಾಲಕ

belagavi 2
07/11/2023

ಬೆಳಗಾವಿ: ಬಸ್ ಚಾಲನೆಯಲ್ಲಿರುವಾಗಲೇ ಚಾಲಕನಿಗೆ ಹೃದಯಾಘಾತವಾದರೂ ಬಸ್ ನ್ನು ತಕ್ಷಣವೇ ರಸ್ತೆ ಬದಿ ನಿಲ್ಲಿಸಿದ ಬಸ್ ನಲ್ಲಿದ್ದ 40ಕ್ಕೂ ಅಧಿಕ ಜನರ ಪ್ರಾಣವನ್ನು ಬಸ್ ಚಾಲಕ ರಕ್ಷಿಸಿದ ಘಟನೆ ಪುಣೆ—ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಮಹಾರಾಷ್ಟ್ರದ ಖೇಡಶಿವಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ದೊಡವಾಡ ಗ್ರಾಮದ ಮೂಗಪ್ಪ ಶಿವಪುತ್ರಪ್ಪ ಸಂಗೊಳ್ಳಿ(41) ಹೃದಯಾಘಾತಕ್ಕೊಳಗಾದರೂ 40 ಜನರ ಪ್ರಾಣ ರಕ್ಷಿಸಿದ ಚಾಲಕರಾಗಿದ್ದಾರೆ. ಬಳಿಕ ಬಸ್ ನಲ್ಲಿದ್ದ ಪ್ರಯಾಣಿಕರು ಶಿವಪುತ್ರಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ, ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ.

ಎದೆ ನೋವು ಕಾಣಿಸುತ್ತಿದ್ದಂತೆಯೇ ನಿರ್ಲಕ್ಷ್ಯವಹಿಸದೇ ತಕ್ಷಣವೇ ಬಸ್ ನನ್ನು ಶಿವಪುತ್ರಪ್ಪನವರು ರಸ್ತೆ ಬದಿಗೆ ನಿಲ್ಲಿಸಿದ್ದಾರೆ. ಇವರ ಸಮಯ ಪ್ರಜ್ಞೆಯಿಂದಾಗಿ 40 ಜನರ ಪ್ರಾಣ ಉಳಿದಿದೆ. ಆದರೆ ಅವರ ಪ್ರಾಣವನ್ನು ಉಳಿಸಲು ಪ್ರಯಾಣಿಕರು ಪ್ರಯತ್ನಿಸಿದರಾದರೂ, ಆಸ್ಪತ್ರೆಗೆ ತಲುಪುವ ಮೊದಲೇ ಅವರು ಇಹಲೋಕ ತ್ಯಜಿಸಿದ್ದಾರೆ.

ಇತ್ತೀಚಿನ ಸುದ್ದಿ