ಸೇತುವೆಯಿಂದ ಉರುಳಿ ಚಲಿಸುತ್ತಿದ್ದ ರೈಲಿನ ಮೇಲೆ ಬಿದ್ದ ಕಾರು: ಮೂವರು ಸಾವು
08/11/2023
ಮುಂಬೈ: ಸೇತುವೆ ಮೇಲಿನಿಂದ ಉರುಳಿದ ಕಾರೊಂದು ಚಲಿಸುತ್ತಿದ್ದ ರೈಲಿನ ಮೇಲೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಧರ್ಮಾನಂದ ಗಾಯಕ್ವಾಡ್, ಮಂಗೇಶ್ ಜಾಧವ್ ಮತ್ತು ನಿತೀನ್ ಜಾಧವ್ ಮೃತಪಟ್ಟವರು ಎಂದು ತಿಳಿದು ಬಂದಿದೆ. ಮೃತರ ಪೈಕಿ ಧರ್ಮಾನಂದ ಗಾಯಕ್ವಾಡ್ ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅಠವಳೆ ) ಕಾರ್ಯಕರ್ತರಾಗಿದ್ದಾರೆ.
ಮುಂಬೈ-ಪನ್ವೇಲ್ ರಸ್ತೆಯಲ್ಲಿ ನೇರಲ್ ಕಡೆಗೆ ಕಾರು ಪ್ರಯಾಣಿಸುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಕಾರು ಸೇತುವೆಯಿಂದ ಉರುಳಿ ರೈಲಿನ ಮೇಲೆ ಬಿದ್ದಿದೆ. ಮಂಗಳವಾರ ಬೆಳಗ್ಗೆ 3 ಅಥವಾ ನಾಲ್ಕು ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.