ಪ್ರವಾಹದಲ್ಲಿ ಕೊಚ್ಚಿ ಹೋದ ತಂದೆ ಮಗಳು - Mahanayaka
3:49 PM Wednesday 11 - December 2024

ಪ್ರವಾಹದಲ್ಲಿ ಕೊಚ್ಚಿ ಹೋದ ತಂದೆ ಮಗಳು

23/10/2020

ಹೈದರಾಬಾದ್: ಪ್ರವಾಹದ ನೀರಿನಲ್ಲಿ ತಂದೆ ಮಗಳು ಕೊಚ್ಚಿಕೊಂಡು ಹೋದ ಘಟನೆ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ನಡೆದಿದ್ದು,  ಮದುವೆ ಮುಗಿಸಿಕೊಂಡು ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ತಂದೆ ನಾಪತ್ತೆಯಾಗಿದ್ದು ಮಗಳ ಮೃತದೇಹ ಪತ್ತೆಯಾಗಿದೆ. ಪೆನುಮುರು ಮೂಲದ ಒಂದೇ ಕುಟುಂಬದ ಐವರು ಬುಧವಾರ ಮದುವೆ ಸಮಾರಂಭದಲ್ಲಿ ಪಾಲ್ಗೊಳಲು ಕಾರಿನಲ್ಲಿ ತೆರಳಿದ್ದರು. ಕಿರಣ್​ ಕುಮಾರ್​ ರೆಡ್ಡಿ ಕಾರು ಚಾಲನೆ ಮಾಡುತ್ತಿದ್ದರು. ಉಳಿದಂತೆ ಪ್ರತಾಪ್​, ಪತ್ನಿ ಶ್ಯಾಮಲಾ, ಮಗಳು ಸಾಯಿ ವಿನಿತಾ ಮತ್ತು ಕಸಿನ್​ ಚಿಂಪಪ್ಪು ಕಾರಿನಲ್ಲಿದ್ದರು.

ಚಾಲಕ ಕಿರಣ್ ನೀರಿನ ಹರಿವನ್ನು ಗಮನಿಸದೇ ಕಾರು ಚಲಾಯಿಸಿದ್ದಾರೆ. ಇದರಿಂದಾಗಿ ಕಾರು ಹಳ್ಳದಲ್ಲಿ ಸಿಲುಕಿದೆ. ಕಾರು ಸ್ಟಾರ್ಟ್​ ಆಗದಿದ್ದಾಗ ಕಿರಣ್​, ಪ್ರತಾಪ್​ ಮತ್ತು ಶ್ಯಮಲಾ ಎಸ್ಕೇಪ್​ ಆಗಿದ್ದಾರೆ. ಈ ವೇಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಗಳನ್ನು ಉಳಿಸಿಕೊಳ್ಳಲು ಪ್ರತಾಪ್​ ಯತ್ನಿಸಿದ್ದಾರೆ. ಆದರೆ, ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಆಂಧ್ರ ಮತ್ತು ತೆಲಂಗಾಣದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿ ಅನೇಕ ಆಸ್ತಿ ನಷ್ಟದೊಂದಿಗೆ ಪ್ರಾಣಿ ಹಾನಿಯೂ ಸಂಭವಿಸಿದೆ.

ಇತ್ತೀಚಿನ ಸುದ್ದಿ