ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯ ಬಿಡುಗಡೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಚಲೋ
25/10/2023
ಉಡುಪಿ: ಎರಡು ವರ್ಷದಿಂದ ಬಾಕಿ ಇರುವ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯ ಕೂಡಲೇ ಬಿಡುಗಡೆ ಗೊಳಿಸಲು ಒತ್ತಾಯಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) ನೇತ್ರತ್ವದಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿ ಚಲೋ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು
ಮಣಿಪಾಲ ಸಿಂಡಿಕೇಟ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಮಿಕರು, ಜಿಲ್ಲಾಧಿಕಾರಿ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಕಟ್ಟಡ ಸಂಘದ ರಾಜ್ಯ ಅಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ ಸಭೆಯನ್ನು ಉದ್ಘಾಟಿಸಿ ಮಾತಾನಾಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ ಗೋಲ್ಲ, ಜಿಲ್ಲಾ ಖಜಾಂಚಿ ಗಣೇಶ್ ನಾಯ್ಕ್,ಉಪಾಧ್ಯಕ್ಷ ಸುಭಾಷ್ ನಾಯಕ್,ಮುಖಂಡರಾದ ಮುರಳಿ,ರಾಮ ಕಾರ್ಕಡ,ಸೈಯದ್,ರಮೇಶ್,ಸುರೇಶ್ ಪಡುಬಿದ್ರಿ,ಉದಯ ಪೂಜಾರಿ,ಶಾರದ ಗುಡ್ಮಿ,ರಾಘುನಾಥ,ರವಿ,ಶೇಖರ್ ಮರಕಾಲ,ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್. ಎಸ್,ಮೊಹನ್ ಉಪಸ್ಥಿತರಿದ್ದರು.