ಮಹಿಳೆಯನ್ನ ರೂಂನಲ್ಲಿ ಕೂಡಿಹಾಕಿಕೊಂಡು ಲೈಂಗಿಕ ಕಿರುಕುಳ: ವೈದ್ಯನಿಗೆ ಹಿಗ್ಗಾಮುಗ್ಗಾ ಥಳಿತ - Mahanayaka

ಮಹಿಳೆಯನ್ನ ರೂಂನಲ್ಲಿ ಕೂಡಿಹಾಕಿಕೊಂಡು ಲೈಂಗಿಕ ಕಿರುಕುಳ: ವೈದ್ಯನಿಗೆ ಹಿಗ್ಗಾಮುಗ್ಗಾ ಥಳಿತ

doctor
21/09/2023

ಚಿಕ್ಕಮಗಳೂರು:  ಮಹಿಳೆಯನ್ನ ರೂಂನಲ್ಲಿ ಕೂಡಿಹಾಕಿಕೊಂಡು ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ  ತಾಲೂಕು ವೈದ್ಯಾಧಿಕಾರಿಗೆ ಮಹಿಳೆಯ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.


Provided by

ಡಿ ಗ್ರೂಪ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆ ವಸತಿ ಗೃಹದಲ್ಲಿ ಘಟನೆ. ಮಹಿಳೆಯನ್ನ ರೂಂನಲ್ಲಿ ಕೂಡಿಹಾಕಿಕೊಂಡು ಏನು ಮಾಡ್ತಿದ್ದೆ…? ಎಂದು ಪ್ರಶ್ನಿಸಿ ಹಿಗ್ಗಾಮುಗ್ಗಾ ಥಳಿಸಲಾಗಿದೆ.

ಎನ್.ಆರ್.ಪುರ ತಾಲೂಕು ಆಡಳಿತ ವೈದ್ಯಾಧಿಕಾರಿ ಎಲ್ಡೋಸ್ ಬಾಳೆಹೊನ್ನೂರು ಸರ್ಕಾರಿ ಅಸ್ಪತ್ರೆ ವಸತಿ ಗೃಹದ ರೂಂನಲ್ಲಿ ಮಹಿಳೆಯನ್ನು ಕೂಡಿ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದು, ವಸತಿ ಗೃಹಕ್ಕೆ ತೆರಳಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.


Provided by

ಈ ಹಿಂದೆ ನರ್ಸ್ ಕೆನ್ನೆಗೆ ಹೊಡೆದು ಅಮಾನತ್ತಾಗಿದ್ದ ವೈದ್ಯ ಎಲ್ಡೋಸ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಘಟನೆಗೆ ಸಂಬಂಧಿಸಿದಂತೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ