ಗೂಗಲ್ ಮ್ಯಾಪ್ ನೋಡಿ ಕಾರು ಚಲಾಯಿಸಿದ ಚಾಲಕ: ಗುಡ್ಡಹತ್ತಿದ ಕಾರು
ಗೂಗಲ್ ಮ್ಯಾಪ್ ನೋಡಿಕೊಂಡು ಡ್ರೈವ್ ಮಾಡಿದ ಪ್ರವಾಸಿಗರೊಬ್ಬರು ಕಾರನ್ನು ಗುಡ್ಡ ಹತ್ತಿಸಿ, ಮಾರ್ಗ ಮಧ್ಯೆ ಸಿಕ್ಕಿ ಹಾಕಿಕೊಂಡಿರುವ ಘಟನೆ ನಡೆದಿದೆ.
ಕರ್ನಾಟಕದಿಂದ SUV ಕಾರಿನಲ್ಲಿ ಊಟಿಗೆ ಗೆರಳಿದ್ದ ವ್ಯಕ್ತಿ, ಊಟಿಯಿಂದ ವಾಪಸ್ ಆಗುತ್ತಿದ್ದ ವೇಳೆ ಗೂಗಲ್ ಮ್ಯಾಪ್ ಬಳಸಿದ್ದಾರೆ.
ಗೂಗಲ್ ಮ್ಯಾಪ್ ನ ಮಾರ್ಗದರ್ಶನದಲ್ಲಿ ಬಂದ ಅವರು ತಮಿಳುನಾಡಿನ ಗುಡಲೂರು ಗುಡ್ಡದ ಮೇಲೆ ಹತ್ತಿದ್ದು, ಗುಡ್ಡ ತಲುಪಿದಾಗ ದಾರಿ ಎಂಡ್ ಆಗಿದೆ.
ಇದು ನೀಲಗಿರಿ ಪ್ರದೇಶವೂ ಆಗಿದ್ದರಿಂದ ಕಾರು ಚಾಲಕ ಬೆದರಿದ್ದಾರೆ. ಕಾರಿನಲ್ಲಿದ್ದವರು ಹೊರ ಬರಲಾಗದೇ ಪರದಾಡಿದ್ದಾರೆ. ಕೊನೆಗೆ ಪೊಲೀಸರ ಸಹಕಾರದೊಂದಿಗೆ ಕಾರನ್ನು ಮೆಟ್ಟಿಲಿನ ಮೇಲೆ ನಿಧಾನವಾಗಿ ಇಳಿಸಲಾಯಿತು.
ಗೂಗಲ್ ಮ್ಯಾಪ್ ನಗರ ಪ್ರದೇಶದಲ್ಲಿ ಪ್ರಯಾಣಿಕರಿಗೆ ದಾರಿ ತಿಳಿಯಲು ಸಾಕಷ್ಟು ಸಹಾಯ ಮಾಡುತ್ತದೆ. ನಗರದಿಂದ ಹೊರ ಪ್ರದೇಶದಲ್ಲಿ ಗೊಂದಲ ಸೃಷ್ಟಿ ಮಾಡುತ್ತದೆ. ಸಾಕಷ್ಟು ಜನರು ಗೂಗಲ್ ಮ್ಯಾಪ್ ನೋಡಿ ಪ್ರಯಾಣಿಸಿ, ದಾರಿ ತಪ್ಪಿ ಪರದಾಡಿದ್ದಾರೆ. ಆದರೂ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಲೇ ಇರುತ್ತದೆ.