ಅಳಿವಿನಂಚಿಗೆ ತಲುಪಿದ ರಣಹದ್ದು: ಉಳಿಸುವ ಅನಿವಾರ್ಯತೆಯಿಂದ 3 ರಾಜ್ಯಗಳಲ್ಲಿ ಸಮೀಕ್ಷೆ - Mahanayaka
7:30 PM Thursday 12 - December 2024

ಅಳಿವಿನಂಚಿಗೆ ತಲುಪಿದ ರಣಹದ್ದು: ಉಳಿಸುವ ಅನಿವಾರ್ಯತೆಯಿಂದ 3 ರಾಜ್ಯಗಳಲ್ಲಿ ಸಮೀಕ್ಷೆ

vulture
25/02/2023

ಚಾಮರಾಜನಗರ: ಒಂದು ಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ರಣಹದ್ದುಗಳು ಈಗ ನಶಿಸುವ ಹಂತ ತಲುಪಿರುವುದರಿಂದ ಎಚ್ಚೆತ್ತ ಅರಣ್ಯ ಸಚಿವಾಲಯವು  ರಣಹದ್ದುಗಳ ಸರ್ವೇಗೆ ಮುಂದಾಗಿದೆ.

ಹೌದು…, ಕರ್ನಾಟಕದ ಬಂಡೀಪುರ, ನಾಗರಹೊಳೆ, ಬಿಆರ್ಟಿ ತಮಿಳುನಾಡಿನ ಮಧುಮಲೈ ಹಾಗೂ ಕೇರಳದ ವೈನಾಡು ಅರಣ್ಯ ಪ್ರದೇಶದಲ್ಲಿ 80 ರ ದಶಕದಲ್ಲಿ ಆಜುಮಾಸು 10 ಸಾವಿರದಷ್ಟಿದ್ದ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು 250 ಇರಬಹುದು ಎನ್ನಲಾಗುತ್ತಿದೆ.

ಅಳಿವಿನಂಚಿನಲ್ಲಿರುವ ಜಟಾಯುಗಳನ್ನು ಉಳಿಸಿಕೊಳ್ಳಲೇ ಬೇಕಾದ ತುರ್ತು ಎದುರಿಗಿರುವ ಹಿನ್ನೆಲೆಯಲ್ಲಿ ನೀಲಗಿರಿ ಶ್ರೇಣಿಯಲ್ಲಿ 25 ಹಾಗೂ 26 ರಂದು ಸರ್ವೇ ನಡೆಯಲಿದ್ದು ಶುಕ್ರವಾರ ಬಂಡೀಪುರದಲ್ಲಿ ರಣಹದ್ದು ಸರ್ವೇಕ್ಷಣೆ ಬಗ್ಗೆ ಸಿಬ್ಬಂದಿಗೆ ತರಬೇತಿ ಕೊಡಲಾಗಿದೆ.

ರಣಹದ್ದುಗಳೇಕೆ ಮುಖ್ಯ:

ಸುಸ್ಥಿರ ಪರಿಸರದಲ್ಲಿ ಒಂದಕ್ಕೊಂದು ಸರಪಳಿ ಸಂಬಂಧ ಹೊಂದಿದ್ದು ರಣಹದ್ದುಗಳು  ಬೇಟೆಯಾಡಿ ಬದುಕುವುದಿಲ್ಲ. ಕಾಡಿನಲ್ಲಿ, ಕಾಡಂಚಿನಲ್ಲಿ ಸತ್ತ ಪ್ರಾಣಿಗಳನ್ನು ತಿಂದು ಬದುಕುವುದರಿಂದ ಕಾಡಿನ ಪರಿಸರ ಸ್ವಚ್ಛತೆಗೆ ರಣಹದ್ದುಗಳು ಬೇಕೆ ಬೇಕು.

ರಣಹದ್ದುಗಳನ್ನು ಉಳಿಸಿಕೊಳ್ಳಲು 2025 ರವರೆಗೆ ಕೇಂದ್ರ ಪರಿಸರ ಸಚಿವಾಲಯವು ಯೋಜನೆ  ಹಾಕಿಕೊಂಡಿದ್ದು, ಅದರ ಮೊದಲ ಹಂತವೇ ಈ ಸರ್ವೇಕ್ಷಣೆಯಾಗಿದೆ. ಕಾಡಿನ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ರಣಹದ್ದುಗಳನ್ನು ಉಳಿಸಲೇ ಬೇಕಿದೆ.

vulture

ನೀಲಗಿರಿ ಶ್ರೇಣಿಯಲ್ಲಿ ಮುಖ್ಯವಾಗಿ ಬಿಳಿಬೆನ್ನಿನ ರಣಹದ್ದು,  ಕೆಂಪು ತಲೆ ರಣಹದ್ದು, ಇಂಡಿಯನ್ ವಲ್ಚರ್, ಈಜಿಪ್ಷಿಯನ್ ವಲ್ಚರ್( ಕಾಡಿ‌ನ ಹೊರಗೆ ಸಾಮಾನ್ಯವಾಗಿ ಕಾಣಸಿಗಲಿದೆ) ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಏಕಕಾಲದಲ್ಲಿ ಸಮೀಕ್ಷೆ ನಡೆಯಲಿದೆ.‌

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ