2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆ ಸವಾಲು ಹಾಕ್ತಾರ ಅಮೆರಿಕದ ಮಾಜಿ ಉಪಾಧ್ಯಕ್ಷ ಪೆನ್ಸ್..?
ಅಮೆರಿಕದ ಮಾಜಿ ಉಪಾಧ್ಯಕ್ಷ ಮೈಕ್ ಪೆನ್ಸ್ ತಾನು 2024 ರಲ್ಲಿ ನಡೆಯುವ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅಮೆರಿಕದ 48 ನೇ ಉಪಾಧ್ಯಕ್ಷರಾಗಿರುವ ಪೆನ್ಸ್ ರಿಪಬ್ಲಿಕನ್ ನಾಮನಿರ್ದೇಶನಕ್ಕಾಗಿ ಪ್ರಕ್ರಿಯೆ ಆರಂಭಿಸಿದ್ದಾರೆ.
ಮೈಕ್ ಪೆನ್ಸ್ ಅವರು ಜೂನ್ 7, 1959 ರಂದು ಇಂಡಿಯಾನಾದಲ್ಲಿ ಐರಿಶ್ ಕ್ಯಾಥೊಲಿಕ್ ಕುಟುಂಬದಲ್ಲಿ ಜನಿಸಿದರು. ಇವರ ಅಜ್ಜ 17 ವರ್ಷದವರಿದ್ದಾಗ ಯುಎಸ್ ಗೆ ವಲಸೆ ಬಂದ ನಂತರ ಇವರ ಕುಟುಂಬವು ಮಿಡ್ ವೆಸ್ಟ್ ನಲ್ಲಿ ನೆಲೆಸಿತು.
ಪೆನ್ಸ್ ಅವರು ತನ್ನ ಯೌವ್ವನದಲ್ಲಿ ಜಾನ್ ಎಫ್ ಕೆನಡಿಯನ್ನು ರೋಲ್ ಮಾಡೆಲ್ ಎಂದು ಪರಿಗಣಿಸಿದ್ದರು. ಕಾಲೇಜಿನಲ್ಲಿ ಇರುವಾಗಲೇ ಇವರು ಇವಾಂಜೆಲಿಕಲ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಹಾಗೆಯೇ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರಿಂದ ಪ್ರಭಾವಿತರಾಗಿ ರಿಪಬ್ಲಿಕನ್ ಪಕ್ಷಕ್ಕೆ ಸೇರಿದರು.
ಇವರ ಹಿರಿಯ ಸಹೋದರ ಗ್ರೆಗ್ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ ನಲ್ಲಿ ರಿಪಬ್ಲಿಕನ್ ಆಗಿದ್ದಾರೆ.
ಟ್ರಂಪ್ ಅವರ ನಿಯಮಗಳನ್ನು ಅಪಾಯಕಾರಿ ಎಂದು ಕರೆದ ಪೆನ್ಸ್, 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ದೇಶವು ಹೊಸ ಬ್ರಾಂಡ್ ನಾಯಕತ್ವವನ್ನು ಹುಡುಕುತ್ತಿದೆ ಎಂದು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw