ಚಟ್ನಿ ರುಚಿಕರವಾಗಿ ತಯಾರಿಸಿಲ್ಲ ಎಂದು ಪತ್ನಿಯನ್ನು ಹೊಡೆದುಕೊಂದ ಪತಿ! - Mahanayaka
1:05 PM Tuesday 24 - December 2024

ಚಟ್ನಿ ರುಚಿಕರವಾಗಿ ತಯಾರಿಸಿಲ್ಲ ಎಂದು ಪತ್ನಿಯನ್ನು ಹೊಡೆದುಕೊಂದ ಪತಿ!

chutney
03/08/2021

ಮಧ್ಯಪ್ರದೇಶ: ಪತ್ನಿ ತಯಾರಿಸಿದ ಚಟ್ನಿ ರುಚಿಕರವಾಗಿಲ್ಲ ಎಂದು ಪತಿಯೋರ್ವ ಆಕೆಯನ್ನು ಥಳಿಸಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ದಾಟಿಯಾದಲ್ಲಿ ನಡೆದಿದ್ದು, ಪತ್ನಿಯನ್ನು ಹತ್ನೆ ಮಾಡಿದ ಬಳಿಕ ಆರೋಪಿ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಇಲ್ಲಿನ ಗೋರಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಉಪರಾಯಗಾಂವ್ ನಲ್ಲಿ ಈ ಘಟನೆ ನಡೆದಿದ್ದು, ಉಪರಾಯನಗಾಂವ್ ನ ಸ್ಥಳೀಯ ವ್ಯಕ್ತಿ ಆನಂದ್ ಗುಪ್ತಾ ಸಮೋಸ ಕಚೋರಿ ಅಂಗಡಿಯನ್ನು ನಡೆಸುತ್ತಿದ್ದರು. ಈ ಅಂಗಡಿಗೆ ಪ್ರತಿ ದಿನ ಅವರ ಪತ್ನಿ ಪ್ರೀತಿ ತಮ್ಮ ಮನೆಯಲ್ಲಿಯೇ ಚಟ್ನಿ ತಯಾರಿಸಿ ಕೊಡುತ್ತಿದ್ದರು.

ಈ ಬಾರಿ ಚಟ್ನಿ ಚೆನ್ನಾಗಿರಲಿಲ್ಲ ಎಂದು ಆರೋಪಿಸಿದ ಆನಂದ್ ಗುಪ್ತಾ, ಚಟ್ನಿ ತಯಾರಿಸುವುದು ಹಾಗೆ ಅಲ್ಲ ಎಂದು ಪತ್ನಿಗೆ ಸಲಹೆ ನೀಡಲು ಹೋಗಿದ್ದಾನೆ. ಆದರೆ, ಇದು ಜಗಳವಾಗಿ ಪರಿವರ್ತನೆಯಾಗಿದ್ದು, ತೀವ್ರ ಮಾತಿನ ಚಕಮಕಿಯ ಬಳಿಕ ಬಳಿಕ ಗಂಡ-ಹೆಂಡತಿಯ ನಡುವೆ ಪರಸ್ಪರ ಹಲ್ಲೆ ನಡೆದಿದ್ದು, ಈ ವೇಳೆ ಆನಂದ ಗುಪ್ತಾ ತನ್ನ ಪತ್ನಿ ಪ್ರೀತಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆನಂದನ ತಾಯಿ ಮಗನನ್ನು ತಡೆದರೂ ಆತ ತೀವ್ರ ಕೋಪಗೊಂಡಿದ್ದರಿಂದ ಪತ್ನಿಯನ್ನು ಮುಗಿಸಿಯೇ ಬಿಟ್ಟಿದ್ದಾನೆ.

ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದು, ಈ ವೇಳೆ ಸ್ಥಳೀಯರು ಗೋರ್ಗಾಟ್ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆರೋಪಿಯು ತನ್ನ ಪತ್ನಿಯ ತಲೆ ಹಾಗೂ ಕುತ್ತಿಗೆಗೆ ದೊಣ್ಣೆಯಿಂದ ಹೊಡೆದಿರುವುದು ಕಂಡು ಬಂದಿದೆ.

ಇನ್ನೂ ಕೇವಲ ಚಟ್ನಿಯ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆಯಾಗಿರುವುದು ಇದೀಗ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಕೋಪದ ಸಂದರ್ಭದಲ್ಲಿ ಚಿಕ್ಕ ವಿಚಾರಗಳು ಕೂಡ ದೊಡ್ಡದಾಗಿಯೇ ಕಾಣುತ್ತದೆ ಎನ್ನುವುದಕ್ಕೆ ಈ ಘಟನೆಯೇ ನಿದರ್ಶನ ಎನ್ನುವಂತಾಗಿದೆ. ಇನ್ನೂ ಈ ಕೃತ್ಯ ಬಳಿಕ ತಪ್ಪಿಸಿಕೊಂಡಿರುವ ಆನಂದನನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿ