ಕೇಂದ್ರ ಸರಕಾರದೊಂದಿಗಿನ ಭಾಷಾ ಸಮರ ತೀವ್ರ: ರೂಪಾಯಿಯ ಚಿಹ್ನೆಯನ್ನೇ ಕೈಬಿಟ್ಟ ತಮಿಳುನಾಡು ಸಿಎಂ

ಕೇಂದ್ರ ಸರಕಾರದೊಂದಿಗಿನ ಭಾಷಾ ಸಮರ ತೀವ್ರಗೊಳಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರಾಜ್ಯ ಬಜೆಟ್‌ಗಾಗಿ ರೂಪಾಯಿಯ ಚಿಹ್ನೆಯನ್ನೇ ಕೈಬಿಟ್ಟಿದ್ದಾರೆ. ಕೇಂದ್ರ ಸರಕಾರದ ತ್ರಿಭಾಷಾ ನೀತಿ ವಿರುದ್ಧ ಸೆಡ್ಡು ಹೊಡೆದು ಹೋರಾಟಕ್ಕಿಳಿದಿರುವ ಸ್ಟಾಲಿನ್ ಈ ಪ್ರಯೋಗ ಮಾಡಿ ಗಮನ ಸೆಳೆದಿದ್ದಾರೆ.
ಮಾರ್ಚ್ 14 ರಂದು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗುವ ರಾಜ್ಯ ಬಜೆಟ್‌ನ ಟೀಸರ್ ಅನ್ನು ಸ್ಟಾಲಿನ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
“ಸಮಾಜದ ಎಲ್ಲಾ ವರ್ಗಗಳಿಗೆ ಅನುಕೂಲವಾಗುವಂತೆ ತಮಿಳುನಾಡಿನ ವ್ಯಾಪಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು…” ಎಂದು ಬರೆದಿದ್ದಾರೆ.
‘ದ್ರಾವಿಡ ಮಾದರಿ’ ಮತ್ತು ‘TNBudget2025’ ಎಂಬ ಹ್ಯಾಶ್‌ಟ್ಯಾಗ್‌ಗಳ ಜತೆಗೆ ಬಜೆಟ್‌ನ ಲೋಗೋದಲ್ಲಿ ಹಿಂದಿ ವರ್ಣಮಾಲೆಯಾದ ‘ರ’ ನಿಂದ ಪ್ರೇರಿತವಾದ ಅಧಿಕೃತ ರೂಪಾಯಿ ಚಿಹ್ನೆಯು ಸ್ಪಷ್ಟವಾಗಿ ಕಾಣೆಯಾಗಿದೆ.
ಹಿಂದಿನ ಎರಡು ಬಜೆಟ್‌ಗಳಲ್ಲಿ, ರಾಜ್ಯ ಲೋಗೋಗಳಿಗಾಗಿ ರೂಪಾಯಿ ಚಿಹ್ನೆಯನ್ನು ಬಳಸಿತ್ತು ಎನ್ನುವುದು ಗಮನಾರ್ಹ ಸಂಗತಿ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj