ತನ್ನನ್ನು ಸಾಕಿದ ವ್ಯಕ್ತಿಯ ಮಡಿಲಿನಲ್ಲಿಯೇ ಪ್ರಾಣ ಬಿಟ್ಟ ಗೊರಿಲ್ಲ: ನೆಟ್ಟಿಗರ ಹೃದಯ ಕರಗಿಸಿದ ಫೋಟೋ - Mahanayaka
1:21 PM Wednesday 10 - September 2025

ತನ್ನನ್ನು ಸಾಕಿದ ವ್ಯಕ್ತಿಯ ಮಡಿಲಿನಲ್ಲಿಯೇ ಪ್ರಾಣ ಬಿಟ್ಟ ಗೊರಿಲ್ಲ: ನೆಟ್ಟಿಗರ ಹೃದಯ ಕರಗಿಸಿದ ಫೋಟೋ

ndakasi
07/10/2021

ಆಫ್ರಿಕಾ: ಗೊರಿಲ್ಲಾವೊಂದು ತಾನು ಸಾಕಿದ್ದ ವ್ಯಕ್ತಿಯ ಮಡಿಲಿನಲ್ಲಿಯೇ ಪ್ರಾಣ ಬಿಟ್ಟ ಘಟನೆ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ(Democratic Republic of Congo)ದ ವಿರುಂಗಾ ನ್ಯಾಷನಲ್ ಪಾರ್ಕ್ (Virunga National Park)ನಲ್ಲಿ ನಡೆದಿದೆ.


Provided by

14 ವರ್ಷ ವಯಸ್ಸಿನ  ಎನ್ ಡಕಾಸಿ ಮೃತಪಟ್ಟ ಗೊರಿಲ್ಲಾ ಆಗಿದ್ದು, ಈ ಗೊರಿಲ್ಲಾವನ್ನು ನೋಡಿಕೊಳ್ಳುತ್ತಿದ್ದ ಆಂಡ್ರೆ ಬೌಮಾ ಅವರ ಮಡಿಲಿನಲ್ಲಿಯೇ ಈ ಗೊರಿಲ್ಲ ಮೃತಪಟ್ಟಿದೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರ ಹೃದಯವನ್ನು ಕರಗಿಸಿದೆ.

ಸೆಪ್ಟಂಬರ್ 26ರಂದು ಎನ್ ಡಕಾಸಿ ಮೃತಪಟ್ಟಿದೆ ಎಂದು ನ್ಯಾಷನಲ್ ಪಾರ್ಕ್ ಅಧಿಕೃತವಾಗಿ ಪ್ರಕಟಿಸಿದೆ. ಎನ್‍ ಡಕಾಸಿ ನ್ಯಾಷನಲ್ ಪಾರ್ಕ್ ಗೆ ಬಂದ ದಿನದಿಂದಲೂ ಆಂಡ್ರೆ ಬೌಮಾ ಅವರೇ ಅದನ್ನು ಆರೈಕೆ ಮಾಡುತ್ತಿದ್ದರು.  2007ರ ಎನ್‍ ಡಕಾಸಿ ನ್ಯಾಷನಲ್ ಪಾರ್ಕಿಗೆ ಬಂದಾಗ ಆಕೆ ಹುಟ್ಟಿ ಕೇವಲ ಎರಡು ತಿಂಗಳಾಗಿತ್ತು.

ಪಾರ್ಕ್ ಗೆ ಬಂದ ಬಳಿಕ ಆಂಡ್ರೆ ಬೌಮಾ ಅವರೇ ಎನ್‍ ಡಕಾಸಿಯನ್ನು ತನ್ನ ಮಗುವಿನಂತೆಯೇ ಸಾಕಿದ್ದಾರೆ. ಅಂದಿನಿಂದ ಇಂದಿನ ವರೆಗೂ ಇತರ ಗೊರಿಲ್ಲಾಗಳ ಜೊತೆಗಿದ್ದರೂ ಎನ್‍ ಡಕಾಸಿಗೆ ಆಂಡ್ರೆ ಬೌಮಾ ಅವರೇ ಅಮ್ಮನಂತಿದ್ದರು. ತನ್ನ ಕೊನೆಯ ದಿನಗಳಲ್ಲಿ ಎನ್‍ ಡಕಾಸಿ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಕೊನೆಗೆ ಇದೀಗ ತನ್ನ ಪ್ರೀತಿ ಪಾತ್ರ ಆಂಡ್ರೆ ಬೌಮಾ ಅವರ ಮಡಿಲಿನಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಯೋಗ ಶಿಕ್ಷಕನಿಂದ ಯುವತಿಯ ಅತ್ಯಾಚಾರ: ಯೋಗದ ಹೆಸರಿನಲ್ಲಿ ಶಿಕ್ಷಕನ ಕಾಮಲೀಲೆ ಬಯಲು

RSS ಶಿಕ್ಷಣ ನೀಡುತ್ತಿರುವುದು ರಾಷ್ಟ್ರ ನಿರ್ಮಾಣಕ್ಕಲ್ಲ, ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತಲು | ಬಿಜೆಪಿಗರಿಗೆ ಕುಮಾರಸ್ವಾಮಿ ತಿರುಗೇಟು

ಹಾವಿನ ಜೊತೆ ಡಾನ್ಸ್: ಸಣ್ಣ ಯಡವಟ್ಟಿನಿಂದ ಪ್ರಾಣ ಕಳೆದುಕೊಂಡ ವೃದ್ಧ

ಪ್ರಚೋದನಾತ್ಮಕ ಅವಹೇಳನಾಕಾರಿ ಭಾಷಣ:  ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲು

ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಯಬಿಟ್ಟ ಕಿಡಿಗೇಡಿ

ಟೈಟ್ ಹಾಫ್ ಜೀನ್ಸ್ ಧರಿಸಿ ಡೇಟ್ ಗೆ ಹೋಗಿದ್ದ ಯುವತಿ ಸಮಸ್ಯೆಗಳಲ್ಲಿ ಸಿಲುಕಿಕೊಂಡಳು!

ತಂದೆಯಿಂದಲೇ ಮಗನ ಮೇಲೆ ಗುಂಡೇಟು: ಬಾಲಕನ ಮೆದುಳು ನಿಷ್ಕ್ರಿಯ | ಅಂಗಾಂಗ ದಾನಕ್ಕೆ ಸಿದ್ಧತೆ

ಕಾರ್ಮಿಕರ ಮೇಲೆ ಗುಂಡು ಹಾರಾಟ ಪ್ರಕರಣ ದಿಕ್ಕು ತಪ್ಪದ ರೀತಿಯಲ್ಲಿ ಸಮಗ್ರ ತನಿಖೆ ನಡೆಸಿ | ಡಿವೈಎಫ್ ಐ ಆಗ್ರಹ

ಅಮಾನವೀಯ ಘಟನೆ: ರಾತ್ರೋ ರಾತ್ರಿ ಮನೆಯಲ್ಲಿದ್ದವರನ್ನ ಹೊರದಬ್ಬಿ ಬೀಗ ಜಡಿದ ಬ್ಯಾಂಕ್ ಸಿಬ್ಬಂದಿ!

ಇತ್ತೀಚಿನ ಸುದ್ದಿ