ಕಾರಿನ ಟಾಪ್ ಮೇಲೆ ಕುಳಿತು ಯುವಕರ ಹುಚ್ಚಾಟ: ಸ್ವಲ್ಪ ಯಾಮಾರಿದ್ರೂ ಸೀದಾ ಯಮನ ಪಾದ!

ಮಂಗಳೂರು: ಕಾರಿನ ಟಾಪ್ ಮೇಲೆ ಕುಳಿತು ಯುವಕರು ಹುಚ್ಚಾಟ ಮೆರೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ—ಸುಳ್ಯ ರಸ್ತೆಯಲ್ಲಿ ನಡೆದಿದೆ.
KA09 MG5880 ನಂಬರ್ ನ ಕಾರಿನಲ್ಲಿ ಒಟ್ಟು 7 ಜನರು ಪ್ರಯಾಣಿಸಿದ್ದು, ಕಾರು ಅತಿವೇಗದಿಂದ ಚಲಿಸುತ್ತಿದ್ದರೆ, ಯುವಕರು ಸನ್ ರೂಫ್ ಮತ್ತು ಕಿಟಕಿಯಿಂದ ಹೊರ ಬಂದು ಡಾನ್ಸ್ ಮಾಡುತ್ತಾ, ಹುಚ್ಚಾಟ ಮೆರೆಯುತ್ತಾ ಪ್ರಯಾಣಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಯುವಕರ ಹುಚ್ಚಾಟವನ್ನು ಮತ್ತೊಂದು ವಾಹನದ ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸ್ವಲ್ಪ ಯಾಮಾರಿ ರಸ್ತೆಗೆ ಬಿದ್ದರೂ ಯುವಕರು ಸೀದಾ ಯಮನ ಪಾದ ಸೇರುತ್ತಿದ್ದರು.
ಘಟನೆ ಸಂಬಂಧ ಸುಳ್ಯ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಬಿಎನ್ ಎಸ್ ಆಕ್ಟ್ 281 IMV, 184 ಸೆಕ್ಷನ್ ಅಡಿಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಯುವಕರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ಎಫ್ ಐಆರ್ ದಾಖಲಾಗುತ್ತಿದ್ದಂತೆಯೇ ಕಾರು ಓನರ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: