ಪತ್ನಿಯ ಅಂತ್ಯ ಕ್ರಿಯೆ ನಡೆಸಿ, ಮಗಳ ಮೃತದೇಹ ಹುಡುಕಲು ಹೊರಟ ವ್ಯಕ್ತಿಯ ಕರುಣಾಜನಕ ಕಥೆ - Mahanayaka
8:48 PM Thursday 14 - November 2024

ಪತ್ನಿಯ ಅಂತ್ಯ ಕ್ರಿಯೆ ನಡೆಸಿ, ಮಗಳ ಮೃತದೇಹ ಹುಡುಕಲು ಹೊರಟ ವ್ಯಕ್ತಿಯ ಕರುಣಾಜನಕ ಕಥೆ

mohammad sarfaraz
07/06/2023

ಒಡಿಶಾ ರೈಲು ಅಪಘಾತ ನಡೆದು, 278 ಜನ ಸಾವನ್ನಪ್ಪಿದ್ದ ಘಟನೆಯ ಬಳಿಕ ರೈಲು ಸಂಚಾರ ಮತ್ತೆ ಆರಂಭವಾಗಿದೆ. ಆದರೆ, ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಗುರುತುಪತ್ತೆ ಇನ್ನೂ ನಡೆದಿಲ್ಲ. ಈ ನಡುವೆ  ವ್ಯಕ್ತಿಯೊಬ್ಬರ ಕಥೆಯಂತೂ ಕರುಣಾಜನಕವಾಗಿದೆ.

ಮೊಮ್ಮದ್ ಸರ್ಫರಾಜ್ ಎಂಬವರು ರೈಲು ದುರಂತದಲ್ಲಿ ಪತ್ನಿ ಹಾಗೂ ಮಗಳನ್ನು ಕಳೆದುಕೊಂಡಿದ್ದಾರೆ. ಈಗಾಗಲೇ ಪತ್ನಿಯ ಮೃತದೇಹ ದೊರಕಿದ್ದು, ಮಗಳ ಮೃತದೇಹ ಹುಡುಕಲು ಶವಗಾರಕ್ಕೆ ಹೋಗಿದ್ದಾರೆ. ಆದರೆ ಇನ್ನೂ ಕೂಡ ಮಗಳ ಮೃತದೇಹ ಪತ್ತೆಯಾಗಿಲ್ಲ.

ಸುಮಾರು 150 ಮೃತದೇಹಗಳನ್ನು ನೋಡಿದ ನಂತರ ಪತ್ನಿಯ ಮೃತದೇಹವನ್ನು ಮೊಮ್ಮದ್ ಸರ್ಫರಾಜ್ ಗುರುತಿಸಿದ್ದರು. ಆದರೆ ಇನ್ನೂ ಕೂಡ ಮಗಳ ಮೃತದೇಹ ಪತ್ತೆಯಾಗಿಲ್ಲ. ಅವರು ಪ್ರತಿದಿನ ಜಿಲ್ಲಾಧಿಕಾರಿಗಳ ಸಂಪರ್ಕದಲ್ಲಿದ್ದಾರೆ. ಬಾಲಸೋರ್ ನಿವಾಸಿಗಳು ಕೂಡ ಮೊಮ್ಮದ್ ಸರ್ಫರಾಜ್ ಅವರಿಗೆ ನೆರವಾಗುತ್ತಿದ್ದಾರೆ.

ನನ್ನ ಮಗಳು ಸತ್ತಿದ್ದಾಳೋ ಬದುಕಿದ್ದಾಳೋ ಅನ್ನೋದು ತಿಳಿದಿಲ್ಲ, ಹಾಗಾಗಿ ಆಕೆಗಾಗಿ ನಾನು ಹುಡುಕಾಟ ನಡೆಸುತ್ತಿದ್ದೇನೆ ಎಂದು ಮೊಮ್ಮದ್ ಸರ್ಫರಾಜ್ ಎನ್ ಡಿ ಟಿವಿಗೆ ತಿಳಿಸಿದ್ದಾರೆ.




ರೈಲು ಅಪಘಾತದಲ್ಲಿ ಸುಮಾರು 1100 ಜನರು ಗಾಯಗೊಂಡಿದ್ದಾರೆ. ಈ ಪೈಕಿ 900 ಜನರನ್ನು ಚಿಕಿತ್ಸೆಯ ಬಳಿಕ ಬಿಡುಗಡೆಗೊಳಿಸಲಾಗಿದೆ. ಸುಮಾರು 200 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ 278 ಜನರಲ್ಲಿ 101 ಮೃತದೇಹಗಳು ಇನ್ನೂ ಬಾಕಿ ಉಳಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ