ಕೆಎಸ್ ಆರ್ ಟಿಸಿ ಬಸ್ ಅಡ್ಡಗಟ್ಟಿ ಪ್ರಯಾಣಿಕರು, ಬಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಕಿಡಿಗೇಡಿ!
ಕಾರವಾರ: ಕೆಎಸ್ ಆರ್ ಟಿಸಿ ಬಸ್ ಅಡ್ಡಗಟ್ಟಿದ ಕಿಡಿಗೇಡಿಯೋರ್ವ ಚಾಲಕ ನಿರ್ವಾಹಕ ಮತ್ತು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡ ಜಾಂಬಾ ಕ್ರಾಸ್ ಬಳಿ ನಡೆದಿದೆ.
ಶಿರವಾಡದ ಸುಭಾಷ್ ಬಾಡಕರ್ ಗೂಂಡಾ ವರ್ತನೆ ತೋರಿದ ವ್ಯಕ್ತಿಯಾಗಿದ್ದಾನೆ. ಬಸ್ ಕಾರವಾರದಿಂದ ಸಿದ್ದರಗೆ ತೆರಳುತ್ತಿತ್ತು. ಈ ವೇಳೆ ಸುಭಾಷ್ ಬಾಡಕರ್ ಶಿರವಾಡ ಜಾಂಬಾ ಕ್ರಾಸ್ ಬಳಿ ಬಸ್ ಮುಂದೆ ಬೈಕ್ ನಿಲ್ಲಿಸಿದ್ದಾನೆ. ದಾರಿ ಬಿಡುವಂತೆ ಪ್ರಯಾಣಿಕ ಹೇಳಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ, ವಿಚಾರಿಸಲು ಹೋದ ಚಾಲಕ, ನಿರ್ವಾಹಕನ ಶರ್ಟ್ ಹಿಡಿದು ಅವರ ಮೇಲೂ ಹಲ್ಲೆ ಮಾಡಿದ್ದಾನೆ.
ಹಲ್ಲೆಯಲ್ಲಿ ಸಾರಿಗೆ ಬಸ್ ಚಾಲಕ ಮಹಮ್ಮದ್ ಇಸಾಕ್ (28) ತಲೆಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಬಸ್ ಚಾಲಕನನ್ನು 108 ಆ್ಯಂಬುಲೆನ್ಸ್ ನಲ್ಲಿ ಸಾಗಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth