ಬಹು ನಿರೀಕ್ಷಿತ ಚಿತ್ರ ‘ಮಾಮನ್ನನ್’ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ: ಮೊದಲ ಬಾರಿಗೆ ಗಂಭೀರ ಪಾತ್ರದಲ್ಲಿ ವಡಿವೇಲು - Mahanayaka

ಬಹು ನಿರೀಕ್ಷಿತ ಚಿತ್ರ ‘ಮಾಮನ್ನನ್’ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ: ಮೊದಲ ಬಾರಿಗೆ ಗಂಭೀರ ಪಾತ್ರದಲ್ಲಿ ವಡಿವೇಲು

maamannan
28/07/2023

ಸಾಮಾಜಿಕ ನ್ಯಾಯದ ಬಗ್ಗೆ ಬಲವಾದ ಧ್ವನಿಯಾಗಿರುವ ತಮಿಳಿನ ‘ಮಾಮನ್ನನ್’ ಚಿತ್ರವು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದ್ದು, ದಾಖಲೆ ಸೃಷ್ಟಿಸುವತ್ತ ದಾಪುಗಾಲು ಹಾಕಿದೆ.


Provided by

ಹಿರಿಯ ಖ್ಯಾತ ನಟ ವಡಿವೇಲು ಪ್ರಮುಖ ಪಾತ್ರವಿರುವ ಈ ಚಿತ್ರದಲ್ಲಿ ಉದಯನಿಧಿ ಸ್ಟಾಲಿನ್, ಕೀರ್ತಿ ಸುರೇಶ್ ಸೇರಿದಂತೆ ಹಲವು ತಾರೆಯರು ನಟಿಸಿದ್ದಾರೆ. ಚಿತ್ರಕ್ಕೆ ಎ.ಆರ್.ರೆಹಮಾನ್ ಅವರು ಸಂಗೀತ ನೀಡಿದ್ದಾರೆ.

ನಿಜ ಕಥೆಯನ್ನಾಧರಿಸಿದ ಚಿತ್ರ ಇದಾಗಿದ್ದು, ಯಾವಾಗಲೂ ಕೇವಲ ಹಾಸ್ಯ ಪಾತ್ರಗಳನ್ನೇ ಮಾಡುತ್ತಿದ್ದ ವಡಿವೇಲು ಅವರು ಇದೇ ಮೊದಲ ಬಾರಿಗೆ ಗಂಭೀರವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಥೆ ಕೂಡ ನೆಲ ಮೂಲದ ಕಥೆಯನ್ನು ಹೊತ್ತಿದೆ.


Provided by

ನೆಟ್ ಫ್ಲಿಕ್ಸ್ ನಲ್ಲಿ ಹಲವು ಭಾಷೆಗಳಲ್ಲಿ ಮಾಮನ್ನನ್ ಚಿತ್ರ ಬಿಡುಗಡೆಯಾಗಿದೆ. ಇನ್ನೂ ಕನ್ನಡ ಡಬ್ಬಿಂಗ್ ಕೂಡ ಆಗಿದೆ. ಆದರೆ, ತಮಿಳು ತಿಳಿದವರು ತಮಿಳಿನಲ್ಲೇ ವೀಕ್ಷಿಸಬಹುದು. ಕನ್ನಡ ಡಬ್ಬಿಂಗ್ ನಲ್ಲಿ ವಿಷಯದ ತಿರುಚುವಿಕೆ ಆಗಿದೆ ಅನ್ನೋ ಆರೋಪಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ. ಹಾಗಾಗಿ ತಮಿಳು ಅರ್ಥವಾಗುವವರು ತಮಿಳಿನಲ್ಲೇ ವೀಕ್ಷಿಸಿ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ