ರಂಝಾನ್ ಉಪವಾಸದ ಸಂದರ್ಭದಲ್ಲಿ ಮುಸಲ್ಮಾನರು ಖರ್ಜೂರ ಸೇವಿಸುವುದು ಯಾಕೆ ಗೊತ್ತಾ?
ರಂಝಾನ್ ಉಪವಾಸ ಈಗಾಗಲೇ ಆರಂಭವಾಗಿದೆ. ಮುಸಲ್ಮಾನರು ಚಾಚೂ ತಪ್ಪದೇ ಈ ತಿಂಗಳಲ್ಲಿ ಉಪವಾಸವನ್ನು ಆಚರಿಸುತ್ತಾರೆ. ಒಂದೆಡೆ ಬಿಸಿಲು ತಾಪ, ಇನ್ನೊಂದೆಡೆ ಉಪವಾಸ. ಇಂತಹ ಕಠಿಣ ಸ್ಥಿತಿಯಲ್ಲಿ ಮುಸಲ್ಮಾನರು ಶ್ರದ್ಧೆಯಿಂದ ಉಪವಾಸ ಆಚರಿಸುತ್ತಾರೆ.
ಉಪವಾಸದ ಬಿಡಲು ಮುಸಲ್ಮಾನರು ಹೆಚ್ಚಾಗಿ ಖರ್ಜೂರವನ್ನು ತಿನ್ನುತ್ತಾರೆ. ಖರ್ಜೂರವು ಸುಸ್ತು ಹೋಗಲಾಡಿಸಲು ಮತ್ತು ದೇಹಕ್ಕೆ ಚೈತನ್ಯ ನೀಡಲು ಸಹಕಾರಿಯಾಗಿದೆ. ಹೀಗಾಗಿ ಕೆಲಸದ ಸ್ಥಳದಲ್ಲಿರುವವರು, ಕಾರ್ಮಿಕರು, ವ್ಯಾಪಾರಿಗಳು ಹೆಚ್ಚಾಗಿ ಉಪವಾಸ ಬಿಡುವ ವೇಳೆ ಖರ್ಜೂರ ಸೇವನೆ ಮಾಡುತ್ತಾರೆ.
ಉಪವಾಸವು ದೇಹವನ್ನು ದುರ್ಬಲಗೊಳಿಸುತ್ತದೆ. ಇಂತಹ ಸಂದರ್ಭದಲ್ಲಿ ಅಧಿಕ ಸುಸ್ತು ಮೊದಲಾದ ಅನುಭವಗಳಾಗುತ್ತವೆ. ಉಪವಾಸ ಮುಕ್ತಾಯವಾಗುವ ವೇಳೆ ಖರ್ಜೂರ ಸೇವನೆ ಮಾಡುವುದರಿಂದ ದೇಹಕ್ಕೆ ಚೈತನ್ಯ ನೀಡುತ್ತದೆ.
ಕಬ್ಬಿಣ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ರಂಜಕ ಸೇರಿದಂತೆ ಅನೇಕ ಪೋಷಕಾಂಶಗಳು ಖರ್ಜೂರದಲ್ಲಿವೆ. ಇದರಲ್ಲಿರುವ ನೈಸರ್ಗಿಕ ಸಿಹಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಕಬ್ಬಿಣದ ಅಂಶವನ್ನು ಹೆಚ್ಚಿಸಲು, ರಕ್ತಹೀನತೆಯಂತಹ ಸಮಸ್ಯೆಗಳನ್ನು ತಡೆಗಟ್ಟಲು ಖರ್ಜೂರವು ಸಹಕಾರಿಯಾಗಿದೆ.
ಬಹಳಷ್ಟು ಜನರು ಉಪವಾಸದ ನಡುವೆಯೂ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಉಪವಾಸ ಬಿಡುವ ಸಮಯದಲ್ಲಿ ತೀವ್ರವಾದ ಹಸಿವು ಇರುತ್ತದೆ. ಇಂತಹ ಸಂದರ್ಭದಲ್ಲಿ ಒಂದು ಖರ್ಜೂರ ತಿಂದರೆ, ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದಲ್ಲದೇ ಆಹಾರ ಮತ್ತು ಪಾನೀಯಗಳ ಅಸಮಾತೋಲನದಿಂದ ಉಂಟಾಗುವ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಖರ್ಜೂರ ಉತ್ತಮವಾಗಿದೆ. ಖರ್ಜೂರದಲ್ಲಿರುವ ಫೈಬರ್ ನ ಅಂಶಗಳು ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಅನೇಕ ರೋಗಗಳಿದ್ದವರು ಕೂಡ ಉಪವಾಸವನ್ನು ಆಚರಿಸುತ್ತಾರೆ. ರಕ್ತದೊತ್ತಡ, ಮಧುಮೇಹ ಇರುವವರು ಕೂಡ ಉಪವಾಸವನ್ನು ಆಚರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗುವುದು ಸಹಜವಾಗಿದೆ. ಆದರೆ ಖರ್ಜೂರದಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂ ಹೇರಳವಾಗಿರುವುದರಿಂದ ಅದು ಬಿಪಿಯನ್ನು ನಿಯಂತ್ರಿಸುತ್ತದೆ. ಮಧುಮೇಹಿಗಳಿಗೆ ನೈಸರ್ಗಿಕ ಸಿಹಿಯೊಂದಿಗೆ ಶಕ್ತಿ ನೀಡುವುದಲ್ಲದೇ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka