ಅಯ್ಯೋ: ಗಾಝಾದಲ್ಲಿ ಪರಿಸ್ಥಿತಿ ಚಿಂತಾಜನಕ; ಹಸಿವು ತಾಳಲಾರದೇ ಮೇವು, ಹುಲ್ಲನ್ನು ತಿಂದ ಜನರು
ಗಾಝಾದ ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಹಸಿವಿನಿಂದ ಕಂಗಟ್ಟಿರುವ ಗಾಝಾದ ಮಂದಿ ಹಸಿವೆಯನ್ನು ತಣಿಸುವುದಕ್ಕಾಗಿ ಮೇವು ಮತ್ತು ಹುಲ್ಲನ್ನು ತಿನ್ನುತ್ತಿದ್ದಾರೆ ಎಂದು ವರದಿಯಾಗಿದೆ. ನಿರಾಶ್ರಿತ ಶಿಬಿರದಲ್ಲಿ ವಾಸಿಸುತ್ತಿರುವ ಸದೇಹಿಯಾ ಅಲ್ ರಹೇಲ್ ಎಂಬ 55 ವರ್ಷದ ಮಹಿಳೆಯ ಹೇಳಿಕೆ ವೈರಲ್ ಆಗಿದೆ.
ಇದೇ ವೇಳೆ ಬೈತ್ ಲಾಹರಿಯ ಎಂಬ ಶಾಲೆಯಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರು ಇದೀಗ ಅಲ್ಲಿಂದ ಹೊರ ಹೋಗುತ್ತಿದ್ದಾರೆ. ದಿನದ ಹಿಂದೆ ಡ್ರೋನುಗಳನ್ನು ಬಳಸಿ ಇಸ್ರೇಲ್ ಈ ಶಾಲೆಗೆ ದಾಳಿ ಮಾಡಿತ್ತು ಮತ್ತು ಅನೇಕರು ಗಾಯಗೊಂಡಿದ್ದರು. ಮನೆ ಮಾರು ನಷ್ಟವಾದ ಜನರು ಟೆಂಟ್ ಗಳಲ್ಲಿ ವಾಸಿಸುತ್ತಿದ್ದು ಅಲ್ಲಿಗೂ ಇಸ್ರೇಲ್ ಬಾಂಬುಗಳನ್ನು ಹಾಕಿದೆ. ಈ ದಾಳಿಯಲ್ಲಿ 21 ಮಂದಿ ಸಾವಿಗೀಡಾಗಿದ್ದಾರೆ.
ಸುರಕ್ಷಿತ ಸ್ಥಳ ಎಂದು ಇಸ್ರೇಲ್ ಸೇನೆಯೇ ಹೇಳಿಕೊಂಡಿರುವ ಜಾಗಕ್ಕೆ ಇದೀಗ ಬಾಂಬ್ ಹಾಕಲಾಗುತ್ತಿದೆ. ಈಗಾಗಲೇ ಇಸ್ರೇಲ್ ಜನಾಂಗ ಹತ್ಯೆಯನ್ನು ನಡೆಸುತ್ತಿದೆ ಎಂದು ಆಮಿನೇಷನ್ ಇಂಟರ್ನ್ಯಾಷನಲ್ ಹೇಳಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj