ಚುನಾವಣಾ ಬಾಂಡ್ ವಿವಾದ: ಎಸ್‌ಬಿಐ ತಪ್ಪು ಮಾಹಿತಿ ನೀಡಿದೆ ಎಂದ ಪತ್ರಕರ್ತೆ ಪೂನಂ ಅಗರ್ ವಾಲ್ - Mahanayaka
5:17 AM Thursday 14 - November 2024

ಚುನಾವಣಾ ಬಾಂಡ್ ವಿವಾದ: ಎಸ್‌ಬಿಐ ತಪ್ಪು ಮಾಹಿತಿ ನೀಡಿದೆ ಎಂದ ಪತ್ರಕರ್ತೆ ಪೂನಂ ಅಗರ್ ವಾಲ್

18/03/2024

ಚುನಾವಣಾ ಬಾಂಡ್‌ ಕುರಿತು ಎಸ್‌ಬಿಐ ತಪ್ಪು ಮಾಹಿತಿ ನೀಡಿದೆ ಎಂದು ಪತ್ರಕರ್ತೆ ಪೂನಂ ಅಗರ್ ವಾಲ್ ಆರೋಪಿಸಿದ್ದಾರೆ. ಈ ಆರೋಪವು ಎಸ್‌ಬಿಐ ಚುನಾವಣಾ ಆಯೋಗಕ್ಕೆ ನೀಡಿರುವ ಎಲ್ಲ ಮಾಹಿತಿಯನ್ನು ಅನುಮಾನದಿಂದಲೇ ನೋಡುವಂತೆ ಮಾಡಿದೆ.

2018ರಲ್ಲಿ ನಾನು 1,000ರೂ. ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದ್ದೆ, ಆದರೆ 2020ರ ಖರೀದಿದಾರರ ಪಟ್ಟಿಯಲ್ಲಿ ತನ್ನ ಹೆಸರು ಕಾಣಿಸಿಕೊಂಡಿದೆ ಎಂದು ಹೇಳಿದ್ದು, ಈ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಿಂದ ವಿವರಣೆಯನ್ನು ಕೇಳಿದ್ದಾರೆ.

ಪತ್ರಕರ್ತೆ ಪೂನಂ ಅಗರ್ ವಾಲ್ ಈ ಕುರಿತು ಪೋಸ್ಟ್‌ ಮಾಡಿದ್ದು, 2018ರಿಂದ ಮಾರ್ಚ್ 2019ರವರೆಗಿನ ಪಟ್ಟಿಯನ್ನು ಪ್ರಕಟಿಸದ ಕಾರಣ ನಾನು ಎರಡನೇ ಸುತ್ತಿನ ಮಾಹಿತಿ ಪ್ರಕಟಣೆಗಾಗಿ ಕಾಯುತ್ತಿದ್ದೆ. ನಾನು ಏಪ್ರಿಲ್ 2018ರಲ್ಲಿ ತಲಾ 1,000 ರೂಪಾಯಿಗಳ 2 ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದೆ. ಆದರೆ ಡೇಟಾವು ನನ್ನ ಹೆಸರನ್ನು 20 ಅಕ್ಟೋಬರ್ 2020ರಲ್ಲಿ ಖರೀದಿ ಮಾಡಿರುವುದಾಗಿ ತೋರಿಸುತ್ತಿದೆ. ಇದು ತಪ್ಪಾಗಿದೆ ಅಥವಾ ಪೂನಂ ಅಗರ್ವಾಲ್ ಹೆಸರಿರುವ ಬೇರೆಯಾರದೂ ಬಾಂಡ್ ಖರೀದಿಸಿದ್ದಾರೆಯೇ? ಇದು ಕಾಕತಾಳಿಯವಾಗಿದೆ ಎಂದು ಹೇಳಿದ್ದಾರೆ.

 




 

ಇತ್ತೀಚಿನ ಸುದ್ದಿ