10:43 AM Wednesday 12 - March 2025

ಗೋಡೆ ಮೈಮೇಲೆ ಕುಸಿದು ಬಿದ್ದರೂ ತನ್ನ ಮಗುವಿನ ಮೈಗೆ ಸಣ್ಣ ಗೆರೆಯೂ ಬೀಳದಂತೆ ಕಾಪಾಡಿದ ತಾಯಿ | ವೈರಲ್ ವಿಡಿಯೋ

world needs mothers
26/09/2021

ಮುಂಬೈ: ತಾಯಿ ತನ್ನ ಮಗುವನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಬೇಕಾದರೂ ಬಲಿ ಕೊಡುತ್ತಾಳೆ. ಸದ್ಯ ಟ್ವಿಟ್ಟರ್ ನಲ್ಲಿ ವೈರಲ್ ಆಗಿರುವ ವಿಡಿಯೋವೊಂದು ತಾಯಿಯ ತ್ಯಾಗವನ್ನು ಮತ್ತೊಮ್ಮೆ ನೆನಪಿಸಿದೆ. ತಾಯಿಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ ವಿಡಿಯೋ ಇದೀಗ ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.

ಐಎಫ್ ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಾಯಿ ಹಾಗೂ ಮಗು ಗೋಡೆಯೊಂದರ ಬದಿಯಲ್ಲಿ ಕುಳಿತುಕೊಂಡಿದ್ದು, ಈ ವೇಳೆ ಏಕಾಏಕಿ ಗೋಡೆ ಕುಸಿದಿದೆ. ಗೋಡೆ ಕುಸಿತಗೊಳ್ಳುವ ಕೊನೆಯ ಕ್ಷಣದಲ್ಲಿ ಎಚ್ಚೆತ್ತುಕೊಳ್ಳುವ ತಾಯಿ ತನ್ನ ಮಗುವನ್ನು ಅಪ್ಪಿಕೊಂಡು ಮಗುವಿನ ಮೇಲೆ ಗೋಡೆಯ ಕಲ್ಲುಗಳು ಬೀಳದಂತೆ ರಕ್ಷಾ ಕವಚವಾಗಿ ನಿಲ್ಲುತ್ತಾಳೆ.

ತಾಯಿಯ ಮೇಲೆ ಗೋಡೆಯ ಇಟ್ಟಿಗೆಗಳು ಬಿದ್ದರೂ ಮಗುವು ಯಾವುದೇ ಅಪಾಯವಾಗಿದೆ ಸುರಕ್ಷಿತವಾಗಿದೆ. ಇದು ಸಣ್ಣ ಇಟ್ಟಿಗೆಯ ಗೋಡೆಯಾಗಿರುವ ಕಾರಣ ತಾಯಿಗೂ ಗಂಭೀರವಾದ ಅಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ. ವಿಡಿಯೋದ ಕೊನೆಯಲ್ಲಿ  ಮಹಿಳೆಯು ಇಟ್ಟಿಗೆಯನ್ನು ಸರಿಸಿ ಇಟ್ಟಿಗೆಗಳಿಂದ ಹೊರ ಬರುತ್ತಿರುವ ದೃಶ್ಯ ಕಂಡು ಬರುತ್ತದೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶೇರ್ ಆಗಿದೆ. ಈ ವಿಡಿಯೋವನ್ನು ಕಂಡು ಸಾಕಷ್ಟು ಜನರು ವಿವಿಧ ಕಮೆಂಟ್ ಗಳನ್ನು ಮಾಡಿದ್ದಾರೆ. ವ್ಯಾಪಕ ಶೇರ್ ಕೂಡ ಆಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಅಮಾನವೀಯ ಘಟನೆ: ಪತ್ನಿಗೆ ನಿದ್ರೆ ಮಾತ್ರೆ ನೀಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ

ಭಾರತ ಬಂದ್: ಬೆಂಗಳೂರಿನಲ್ಲಿ ಹೈಅಲಾರ್ಟ್ | ಬಂದ್ ತೀವ್ರ ಸ್ವರೂಪದಲ್ಲಿರುವ ಸಾಧ್ಯತೆ!

ದಲಿತ ಮಕ್ಕಳ ಊಟದ ತಟ್ಟೆಯನ್ನು ಇತರ ಮಕ್ಕಳು ಮುಟ್ಟುತ್ತಿಲ್ಲ | ದೇವರಂತ ಮಕ್ಕಳ ಮೇಲೆಯೂ ಅಸ್ಪೃಶ್ಯತೆಯ ಕರಿನೆರಳು

ಪ್ರತಿಭಟನೆ ಹೆಸರಲ್ಲಿ ಜನರಿಗೆ ತೊಂದರೆ ಕೊಡುವುದು ಬೇಡ | ಭಾರತ್ ಬಂದ್ ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ಚಿಕಿತ್ಸಾಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ: ಮಾಲಿಕ ಸಹಿತ ಮೂವರು ಅರೆಸ್ಟ್

ಪ್ರೀತಿಸಿ ವಿವಾಹವಾದ ಪತ್ನಿಗೆ ಅಕ್ರಮ ಸಂಬಂಧ | ಫೇಸ್ ಬುಕ್ ಲೈವ್ ಗೆ ಬಂದು ಪತಿ ಆತ್ಮಹತ್ಯೆ

ಕೃಷ್ಣ ಬೆಣ್ಣೆ ಕದ್ದರೆ ತುಂಟಾಟ, ಈ ಬಾಲಕ ಹಸಿವಿನಿಂದ ತಿಂಡಿ ಕದ್ದರೆ ಅಪರಾಧವೇ? | ನ್ಯಾಯಾಧೀಶರ ಪ್ರಶ್ನೆ

ಮದುವೆಯಾದ ಕೆಲವೇ ಹೊತ್ತಿನಲ್ಲಿ ಪ್ರೇಮಿಯೊಂದಿಗೆ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಪೋಷಕರು!

 

ಇತ್ತೀಚಿನ ಸುದ್ದಿ

Exit mobile version