ವಿಜಯೇಂದ್ರ ಪರ ಲಿಂಗಾಯಿತರು ಇಲ್ಲ, ಪೇಮೆಂಟ್ ಸ್ವಾಮಿಗಳು ಇದ್ದಾರೆ: ಯತ್ನಾಳ್
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣರಾಜಕೀಯ ತಾರಕಕ್ಕೇರಿದ್ದು, ರಾಜ್ಯಾಧ್ಯಕ್ಷರ ಬದಲಾವಣೆ ಬಡಿದಾಟ ದಿಲ್ಲಿ ವರಿಷ್ಠರ ಅಂಗಳಕ್ಕೆ ತಲುಪಿದೆ. ಈಗಾಗಲೇ ರೆಬೆಲ್ ನಾಯಕರ ತಂಡ ದಿಲ್ಲಿಯಲ್ಲಿ ಬೀಡುಬಿಟ್ಟಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಈ ನಡುವೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವಕಾಶ ಸಿಕ್ಕರೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರಲ್ಲದೇ ದಿಲ್ಲಿಯಲ್ಲಿ ಭಿನ್ನರ ತಂಡ ಸೇರಿಕೊಂಡಿದ್ದಾರೆ.
ಇನ್ನೂ ಕೆಲವು ದಿನಗಳ ಕಾಲ ದಿಲ್ಲಿಯಲ್ಲೇ ಇದ್ದು ಯತ್ನಾಳ್ ವರಿಷ್ಠರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ನಾವು ಕೇಂದ್ರ ಸಚಿವರನ್ನು ಒಬ್ಬೊಬ್ಬರೇ ಭೇಟಿ ಮಾಡುತ್ತಿದ್ದೇವೆ. ಹೈಕಮಾಂಡ್ ನಾಯಕರು ಏನಂತಾರೆ ಎಂದು ಕಾದು ನೋಡಬೇಕಿದೆ ಎಂದಿದ್ದಾರೆ.
ಇನ್ನೂ ಯಡಿಯೂರಪ್ಪ ಅವರ ಪರ ಲಿಂಗಾಯಿತರು ಇಲ್ಲ, ಅದು ಮುಗಿದ ಅಧ್ಯಾಯ. ಯಡಿಯೂರಪ್ಪ ಮೇಲೆ ಗೌರವವಿತ್ತು, ಆದರೆ ಅದನ್ನು ಅವರು ಉಳಿಸಿಕೊಂಡಿಲ್ಲ. ಅವರ ಮಗ ಅಪ್ಪನನ್ನು ಜೈಲಿಗೆ ಕಳಿಸಿದ್ದಾನೆ. ಅವರನ್ನು ಮತ್ತೆ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವುದಕ್ಕೆ ನಮ್ಮ ಸರ್ವತಾ ವಿರೋಧವಿದೆ ಎಂದಿದ್ದಾರೆ.
ಇನ್ನೂ ವಿಜಯೇಂದ್ರ ಅವರಿಗೆ ಲಿಂಗಾಯಿತ ಸಮುದಾಯದ ಬೆಂಬಲ ಇಲ್ವಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೂ ಇಲ್ಲ, ಒಂದಿಬ್ಬರು ಪೇಮೆಂಟ್ ಸ್ವಾಮಿಗಳು ಇದ್ದಾರೆ. 1 ಲಕ್ಷ ಕೊಟ್ಟರೆ 1 ಸ್ಟೇಟ್ ಮೆಂಟ್ ಕೊಡುತ್ತಾರೆ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: