ಅಭಿವೃದ್ಧಿ ಮತ್ತು ಆಮಿಷದ ನಡುವೆ ಚುನಾವಣೆ ನಡೆಯುತ್ತಿದೆ: ಸಿಎಂ ಬೊಮ್ಮಾಯಿ - Mahanayaka
2:11 AM Thursday 12 - December 2024

ಅಭಿವೃದ್ಧಿ ಮತ್ತು ಆಮಿಷದ ನಡುವೆ ಚುನಾವಣೆ ನಡೆಯುತ್ತಿದೆ: ಸಿಎಂ ಬೊಮ್ಮಾಯಿ

huballi
25/04/2023

ಹುಬ್ಬಳ್ಳಿ; ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ರೋಡ್ ಶೋ ನಡೆಸಿದರು.ಜಯವಾಹಿನಿ ವಾಹನದಲ್ಲಿ ಬಿಜೆಪಿ ಬೆಂಬಲಿಗರೊಂದಿಗೆ ಅಮರಗೋಳ ಬೀರೇಶ್ವರ ದೇವಸ್ಥಾನದಿಂದ ಗ್ರಾಮದ ಪ್ರಾಥಮಿಕ ಸಹಕಾರಿ ಸಂಘದವರೆಗೆ ರೋಡ್ ಶೋ ನಡೆಸಿದರು.

ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಅರವಿಂದ ಬೆಲ್ಲದ ಅವರಿಕೋಸ್ಕರ ಮತಯಾಚನೆ ಮತಯಾಚನೆ ನಡೆಸಿದರು.ಗ್ರಾಮದ ಜನತೆ ಬೊಮ್ಮಾಯಿಗೆ ದಾರಿಯುದ್ದಕೂ ಹೂಮಳೆ ಸುರಿಸಿ ಸ್ವಾಗತಿಸಿದ್ದು, ಬಿಜೆಪಿ ಬಾವುಟ ಪ್ರದರ್ಶಿಸಿದರು. ಮಾತ್ರವಲ್ಲದೇ ಬಿಜೆಪಿ ಪರ ಘೋಷಣೆ ಕೂಗಿ ಸಂತಸ ವ್ಯಕ್ತಡಿಸಿದರು.

ಇದೇ ವೇಳೆ ಮಾತನಾಡಿದ ಬೊಮ್ಮಾಯಿ, ಗ್ರಾಮದ ಅಭಿವೃದ್ಧಿಗೆ ಕೊಡುಗೆ ನೀಡಿದವರು ಯಾರು, ಚುನಾವಣೆ ಸಂದರ್ಭದಲ್ಲಿ ಬಂದು ಹೊಲಿಗೆ ಯಂತ್ರ ನೀಡಿ ಪ್ರಚಾರ ಗಿಟ್ಟಿಸಿಕೊಂಡವರು ಯಾರು ಎನ್ನುವುದು ನಿಮಗೆಲ್ಲ ತಿಳಿದಿದೆ. ಐನೂರು, ಒಂದು ಸಾವಿರ ರೂಪಾಯಿಗೆ ಖರೀದಿಸಿ ನೀಡಿದ ಯಂತ್ರಗಳೆಲ್ಲ ಹಾಳಾಗಿದೆ. ಅಭಿವೃದ್ಧಿ ಮತ್ತು ಆಮಿಷದ ನಡುವೆ ಚುನಾವಣೆ ನಡೆಯುತ್ತಿದೆ ಎಂದರು.

ಬೆಲ್ಲದ ಅವರು ಅಭಿವೃದ್ಧಿಗೆ ಪೂರಕವಾದ ವ್ಯಕ್ತಿಯಾಗಿದ್ದಾರೆ ಎಂದು ಅರವಿಂದ ಬೆಲ್ಲದ ಅವರನ್ನು ಹೊಗಳಿದರು. ಗ್ರಾಮದವರೆಲ್ಲರೂ ಒಗ್ಗಟ್ಟಾಗಿ ಬೆಲ್ಲದ ಅವರನ್ನುಅತೀ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಸಿಎಂ ಜನರಲ್ಲಿ ವಿನಂತಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ