ಅಂಬೇಡ್ಕರ್ ಅವರ ಬಗ್ಗೆ ಸಮಾಜದಲ್ಲಿ ಅರಿವಿನ ಕೊರತೆ ಬಹಳಷ್ಟಿದೆ: ದಿನೇಶ್ ಹೆಗ್ಡೆ ಉಳೆಪಾಡಿ
ಹಿಂದೆ ಶಿಕ್ಷಣ, ಜಮೀನು,ಕಾನೂನು ಇವೆಲ್ಲಾ ಕೆಲವರ ಮಾತ್ರ ಅಥವಾ ಆರ್ಥಿಕವಾಗಿ ಬಲಾಡ್ಯರಾಗಿದ್ದವರ ಸ್ವತ್ತಾಗಿತ್ತು, ಇವತ್ತು 16 ವರ್ಷದವರೆಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಗಿ ಕಾನೂನು ರಚನೆಯಾಗಿದೆ. ಆರ್ಥಿಕವಾಗಿ ಬಲಾಢ್ಯರಾಗಿದ್ದವರಲ್ಲಿ ಮಾತ್ರ ಇದ್ದ ಜಮೀನು, ಇಂದಿರಾಗಾಂಧಿಯವರ ಮೂಲಕ ಒಂದು ಹಂತದವರೆಗೆ ಉಳುವವನೇ ಹೊಲದೊಡೆಯನಾಗುವ ಮೂಲಕ ಹೆಚ್ಚಿನವರಿಗೆ ಜಮೀನು ದೊರಕುವಂತಾಯಿತು .ಯಾವನೇ ಒಬ್ಬ ವ್ಯಕ್ತಿ ತನಗೆ ಅನ್ಯಾಯವಾದರೆ ಕೇವಲ ಒಂದು ಪತ್ರ ಬರೆಯುವುದರ ಮುಖೇನ ಹೈಕೋರ್ಟ್, ಸುಪ್ರೀಂ ಕೋರ್ಟು ಗಳು ಆ ವ್ಯಕ್ತಿಯ ಬಳಿಗೆ ಬರುವ ವ್ಯವಸ್ಥೆಯಿದೆ. ಇದಕ್ಕೆಲ್ಲಾ ಕಾರಣವಾಗಿದ್ದೇ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ನಮ್ಮ ಸಂವಿಧಾನ. ಆದರೆ, ಇವತ್ತು ಇದರ ಅರಿವಿನ ಕೊರತೆ ನಮ್ಮ ಸಮಾಜದಲ್ಲಿ ಹೆಚ್ಚಾಗಿದೆ. ಆದರೂ ಇಂತಹ ಕಾರ್ಯಕ್ರಮಗಳ ಮೂಲಕ ಮುಂದಿನ ತಲೆಮಾರುಗಳಾದ ಈ ವಿದ್ಯಾರ್ಥಿಗಳು ಅದರ ಮಾಹಿತಿಗಳನ್ನು ಅರಿತು ಬಾಳುವಂತಾಗಲಿ ಎಂದು ಖ್ಯಾತ ನ್ಯಾಯವಾದಿಗಳಾದ ದಿನೇಶ್ ಹೆಗ್ಡೆ ಉಳೆಪಾಡಿ ತಿಳಿಸಿದರು.
ಪ್ರಜಾಧ್ವನಿ ಕರ್ನಾಟಕ ಮತ್ತು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಸಂವಿಧಾನದ ಅರಿವು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಜಾಧ್ವನಿಯ ಗೌರವ ಸದಸ್ಯರು ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ನಿರ್ದೇಶಕರಾದ ಕೆ.ಪಿ. ಜಾನಿ ಪ್ರಾಸ್ತಾವಿಕ ಮಾತುಗಳನ್ನಾಡಿ, ನಮ್ಮ ಸ್ವಾತಂತ್ರ್ಯ ಹೋರಾಟಗಾರರೆಲ್ಲರ ಮನದಾಳದ ಆಶಯವನ್ನು ಇಡೀ ಜಗತ್ತು ಸುತ್ತಾಡಿ, ಎಲ್ಲಾ ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ ಅಕ್ಷರಗಳ ಮೂಲಕ ಜೋಡಿಸಿ ಒಂದು ಪುಸ್ತಕದ ರೂಪದಲ್ಲಿ ಜಗತ್ತಿನ ಶ್ರೇಷ್ಠ ಸಂವಿಧಾನವನ್ನಾಗಿ ಡಾಕ್ಟರ್ ಬಾಬಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಅರ್ಪಿಸಿದರು. ಅದರಂರೆ ನಾವೆಲ್ಲಾ ತಾಯಿ ಭಾರತಿಯ ಮಕ್ಕಳು ಎನ್ನುವ ನೆಲೆಯಲ್ಲಿ ಒಂದಾಗಿ ಬಾಳುವುದರ ಅಗತ್ಯ ಎಂದರಲ್ಲದೇ ಸಂವಿಧಾನದ ಈ ಆಶಯವನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ವರೂ, ವಿಶೇಷವಾಗಿ ವಿದ್ಯಾರ್ಥಿಗಳು ಪ್ರಜಾಧ್ವನಿಯೊಂದಿಗೆ ಕೈಜೋಡಿಸಬಹುದು ಎಂದು ಕರೆ ನೀಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: