ಗಾಝಾದ ಪೂರ್ವ ಭಾಗಕ್ಕೆ ಫೆಲೆಸ್ತೀನಿಯರು ಮರಳುವುದಕ್ಕೆ ಅವಕಾಶ ನೀಡಲ್ಲ: ಇಸ್ರೇಲಿ ಸೇನೆ ಘೋಷಣೆ
ಗಾಝಾದ ಪೂರ್ವ ಭಾಗಕ್ಕೆ ಫೆಲೆಸ್ತೀನಿಯರು ಮರಳುವುದಕ್ಕೆ ಅವಕಾಶ ನೀಡಲ್ಲ ಎಂದು ಇಸ್ರೇಲಿ ಸೇನೆ ಘೋಷಿಸಿದೆ. ಫೆಲೆಸ್ತೀನಿ ನಾಗರಿಕರಲ್ಲಿ ಒಬ್ಬರು ಕೂಡ ಗಾಝಾದ ಪೂರ್ವ ಭಾಗಕ್ಕೆ ಮರಳಲಾರರು. ಜಬಲಿಯ ಮುಂತಾದ ಗಾಝಾದ ಪೂರ್ವ ಭಾಗದಲ್ಲಿ ಇಸ್ರೇಲಿ ಸೇನೆಯ ಚಟುವಟಿಕೆ ಪುನರಾರಂಭವಾಗುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಸೇನೆ ಹೇಳಿದೆ.
ಯಾವುದೇ ಮಾನವೀಯ ಸಹಾಯವೂ ಗಾಝಾದ ಪಶ್ಚಿಮ ಭಾಗಕ್ಕೆ ತಲುಪುವುದಕ್ಕೆ ಇಸ್ರೇಲ್ ಅನುಮತಿಸುತ್ತಿದೆಯೇ ಹೊರತು ಪೂರ್ವ ಭಾಗಕ್ಕೆ ಅನುಮತಿಸುತ್ತಿಲ್ಲ. ಅಲ್ಲಿ ಯಾರೂ ವಾಸಿಸದೆ ಇರುವುದೇ ಇದಕ್ಕೆ ಕಾರಣ ಎಂದು ಇಸ್ರೇಲ್ ಹೇಳಿದೆ. ಇನ್ನು ಮುಂದೆ ಪೂರ್ವ ಗಾಝಾದ ಪ್ರದೇಶಕ್ಕೆ ಜನರು ಮರಳಿ ಬರುವುದಕ್ಕೆ ಅನುಮತಿಸುವುದಿಲ್ಲ ಎಂದು ಇಸ್ರೇಲ್ ಹೇಳಿದೆ.
ಜಬಲಿಯಾದಿಂದ ಜನರು ವಲಸೆ ಹೋಗದಂತೆ ಹಮಾಸ್ ತೀವ್ರ ಶ್ರಮ ನಡೆಸಿತ್ತು. ಇದರಿಂದಾಗಿ ಇಸ್ರೇಲ್ ಸೇನೆ ಇಲ್ಲಿ ಹತ್ಯಾಕಾಂಡವನ್ನೇ ನಡೆಸಿತ್ತು. ಆಹಾರ ಅಲ್ಲಿಗೆ ತಲುಪದಂತೆ ನೋಡಿಕೊಂಡಿತ್ತು. ಈಗ ಜಬಲಿ ಯದಲ್ಲಿ ಕೇವಲ 100ರಷ್ಟು ಸಂಖ್ಯೆಯ ಜನರು ಮಾತ್ರ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರದೇಶದಲ್ಲಿ ನಮ್ಮ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ.
ಹಮಾಸ್ ನೊಂದಿಗೆ ಸಂಬಂಧ ಇದೆ ಎಂದು ಹೇಳಿ ಇಲ್ಲಿಂದ ಸುಮಾರು 700 ರಷ್ಟು ಮಂದಿಯನ್ನು ಇಸ್ರೇಲ್ ಈಗಾಗಲೇ ಬಂಧಿಸಿದೆ. ಈ ಯುದ್ಧ ಆರಂಭವಾದ ಬಳಿಕ ಪೂರ್ವ ಗಾಝಾದಿಂದ ಲಕ್ಷಕ್ಕಿಂತಲೂ ಅಧಿಕ ಇನ್ನಿತರ ಪ್ರದೇಶಗಳಿಗೆ ಪಲಾಯನ ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj