ಬೇಸಿಗೆಯಲ್ಲಿ ಈ ಆಹಾರಗಳನ್ನು ಸೇವಿಸಲೇ ಬಾರದು!

food
03/05/2024

ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶದ ಕೊರತೆ ಕಾಡುತ್ತದೆ. ಹಾಗಾಗಿ ಕಾಫಿ ಕುಡಿಯುವುದು ಉತ್ತಮವಲ್ಲ, ಆದಷ್ಟು ಕಾಫಿ ಕುಡಿಯುವುದನ್ನು ಕಡಿಮೆಗೊಳಿಸಿ.

ಉಪ್ಪಿನಕಾಯಿಯಲ್ಲಿ ಸಾಕಷ್ಟು ಲವಣಾಂಶವಿರುತ್ತದೆ. ಇದರ ಸೇವನೆಯಿಂದ ಡೀಹೈಡ್ರೇಷನ್ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದು ಜೀರ್ಣಕ್ರಿಯೆಗೂ ಅಡ್ಡಿಪಡಿಸಬಹುದು. ಹಾಗಾಗಿ ಬೇಸಿಗೆಯಲ್ಲಿ ಉಪ್ಪಿನ ಕಾಯಿ ತಿನ್ನುವುದು ಉತ್ತಮವಲ್ಲ.

ಡ್ರೈಫ್ರುಟ್ಸ್ ಪೋಷಕಾಂಶಗಳ ಆಗರವಾಗಿದೆ. ಆದರೆ ಇದು ದೇಹದ ಉಷ್ಣತೆಯನ್ನು ಹೆಚ್ಚಿಸಬಹುದು. ಬೇಸಿಗೆಯಲ್ಲಿ ಡ್ರೈಫ್ರಟ್ಸ್ ಸೇವನೆ ದೇಹಕ್ಕೆ ಹೆಚ್ಚು ಸುಸ್ತು ಉಂಟುಮಾಡಬಹುದು.

ಬೇಸಿಗೆಯಲ್ಲಿ ಮಿಲ್ಕ್ ಶೇಕ್ ಗಳನ್ನು ಕುಡಿಯಲು ಮನಸ್ಸು ಬಯಸುವುದು ಸಹಜ. ಆದರೆ ಇದರಲ್ಲಿ ಸಕ್ಕರೆಯ ಅಂಶ ಹೆಚ್ಚು ಇದ್ದು, ಇದು ನಿರ್ಜಲೀಕರಣ ಸಮಸ್ಯೆಗೆ ಕಾರಣವಾಗಬಹುದು.

ಕ್ಯಾಪ್ಸೈಸಿನ್ ಅಂಶವಿರುವ ಮಸಾಲೆ ಪದಾರ್ಥಗಳು ಪಿತ್ತ ದೋಷವನ್ನು ಹೆಚ್ಚಿಸಬಹುದು. ಇದು ದೇಹದ ಉಷ್ಣಾಂಶವನ್ನು ಹೆಚ್ಚಿಸಿ, ಅತಿಯಾಗಿ ಬೆವರುವಂತೆ ಮಾಡುತ್ತದೆ. ಇದರಿಂದ ಡೀಹೈಡ್ರೇಷನ್ ಉಂಟಾಗಬಹುದು.

ಹೆಚ್ಚು ಉಷ್ಣಾಂಶದಲ್ಲಿ ಹುರಿಯುವ ಗ್ರಿಲ್ ಮಾಡಿರುವ ಮಾಂಸಾಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿ ಉಷ್ಣತೆ ಇನ್ನಷ್ಟು ಹೆಚ್ಚಳವಾಗಬಹುದು. ಹಾಗಾಗಿ ಇಂತಹ ಪದಾರ್ಥ ಬೇಸಿಗೆಯಲ್ಲಿ ನಿಯಂತ್ರಿಸುವುದು ಉತ್ತಮ.

ಸಮೋಸ, ಚಾಟ್ಸ್, ಫ್ರೆಂಚ್ ಫ್ರೈಸ್ ನಂತಹ ಕರಿದ ಪದಾರ್ಥಗಳು ಬೇಸಿಗೆಯಲ್ಲಿ ದೇಹಕ್ಕೆ ಉತ್ತಮವಲ್ಲ, ಇದು ದೇಹದಲ್ಲಿ ನಿರ್ಜಲೀಕರಣ ಉಂಟು ಮಾಡಿ ಜೀರ್ಣ ಕ್ರಿಯೆಗೂ ಅಡ್ಡಿಪಡಿಸಬಹುದು.

ಬೇಸಿಗೆಯಲ್ಲಿ ಸೋಡಾ ಹಾಗೂ ಸೋಡಾದ ಅಂಶವಿರುವ ಪಾನೀಯಗಳನ್ನು ಸೇವಿಸುವುದರಿಂದ ಬೇಗನೇ ದೇಹ ಡೀಹೈಡ್ರೇಟ್ ಆಗಬಹುದು.

ಬೇಸಿಗೆಯಲ್ಲಿ ಆಲ್ಕೋಹಾಲ್ ಕುಡಿಯುವುದರಿಂದ ಡೀಹೈಡ್ರೇಷನ್  ಉಂಟಾಗುತ್ತದೆ. ಜೊತೆಗೆ ಇದರಿಂದ ತಲೆನೋವು, ಬಾಯಿ ಒಣಗುವುದು ಹಾಗೂ ದೇಹದ ಉಷ್ಣಾಂಶ ಹೆಚ್ಚುವುದು ಇಂತಹ ಸಮಸ್ಯೆಗಳು ಕಾಡಬಹುದು.

ಅತಿಯಾಗಿ ಉಪ್ಪಿನಾಂಶ ಸೇವನೆಯು ಬೇಸಿಗೆಯಲ್ಲಿ ಡೀಹೈಡ್ರೇಷನ್ ಗೆ ಕಾರಣವಾಗಬಹುದು. ಇದರಿಂದ ದೇಹದಲ್ಲಿ ಸುಸ್ತು, ಆಯಾಸ ಕಾಣಿಸಿಕೊಳ್ಳಬಹುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version