ಹಮಾಸ್ ವಶದಲ್ಲಿರುವ ಇಸ್ರೇಲ್ ಯುವತಿಗೆ ಚಿಕಿತ್ಸೆ: ವೀಡಿಯೋ ರಿಲೀಸ್ ಮಾಡಿದ ಹಮಾಸ್ - Mahanayaka
8:25 PM Saturday 21 - September 2024

ಹಮಾಸ್ ವಶದಲ್ಲಿರುವ ಇಸ್ರೇಲ್ ಯುವತಿಗೆ ಚಿಕಿತ್ಸೆ: ವೀಡಿಯೋ ರಿಲೀಸ್ ಮಾಡಿದ ಹಮಾಸ್

18/10/2023

ಇಸ್ರೇಲ್-ಹಮಾಸ್‌ ಸಂಘರ್ಷದ ನಡುವೆ ಇಸ್ರೇಲ್‌ನ 200 ಕ್ಕೂ ಅಧಿಕ ನಾಗರಿಕರನ್ನು ಒತ್ತೆಯಾಳಾಗಿರಿಸಿಕೊಂಡಿರುವ ಹಮಾಸ್‌, ತನ್ನ ವಶದಲ್ಲಿರುವ ಇಸ್ರೇಲ್ ಯುವತಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
21 ವರ್ಷದ ಮಿಯಾ ಸ್ಕೆಮ್ ಎಂಬಾಕೆಯ ವೀಡಿಯೊವನ್ನು ಹಮಾಸ್‌ನ ಮಿಲಿಟರಿ ವಿಂಗ್ ಇಜ್ ಅದ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ಬಿಡುಗಡೆ ಮಾಡಿದೆ.

ಹಮಾಸ್‌ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಯುವತಿಯ ತೋಳಿಗೆ ಬ್ಯಾಂಡೇಜ್‌ ಹಾಕಲಾಗಿದೆ. ಒತ್ತೆಯಾಳಾಗಿರುವ ಯುವತಿ ಗಾಜಾ ಗಡಿಯ ಸಮೀಪವಿರುವ ಸಣ್ಣ ಇಸ್ರೇಲಿ ನಗರವಾದ ಸ್ಡೆರೋಟ್‌ ಮೂಲದವಳು ಎಂದು ಹೇಳಲಾಗಿದೆ.

ಆಕೆ ಕಿಬ್ಬುಟ್ಜ್ ರೀಮ್‌ನಲ್ಲಿ ನಡೆದ ಸೂಪರ್‌ನೋವಾ ಸುಕ್ಕೋಟ್ ಸಂಗೀತ ಉತ್ಸವದಲ್ಲಿ ಭಾಗವಹಿಸಿದ್ದಾಗ ಹಮಾಸ್ ಪಡೆ ಪಾರ್ಟಿ ಮೇಲೆ ದಾಳಿ ನಡೆಸಿ, ಮಿಯಾ ಸೇರಿದಂತೆ ಹಲವರನ್ನು ಒತ್ತೆಯಾಳಾಗಿ ಅಪಹರಿಸಿಕೊಂಡು ಹೋಗಿದೆ. ಈ ದಾಳಿಯಲ್ಲಿ ಕನಿಷ್ಟ 260 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.


Provided by

ಟೆಲಿಗ್ರಾಮ್ ಮೂಲಕ ಹಮಾಸ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಗಾಯಾಳು ಯುವತಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವುದು ಸೆರೆಯಾಗಿದೆ. ಹಮಾಸ್ ವೈದ್ಯಕೀಯ ಚಿಕಿತ್ಸೆ ನೋಡಿಕೊಳ್ಳುತ್ತಿದೆ ಎಂದು ಯುವತಿ ಹೇಳಿದ್ದಾಳೆ.
ತನ್ನ ಕೈ ಮುರಿದಿರುವ ಕಾರಣ ಗಾಜಾದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಮತ್ತು ಸಾಧ್ಯವಾದಷ್ಟು ಬೇಗ ಮನೆಗೆ ಹೋಗಬೇಕೆಂದು ಹೇಳಿದ್ದಾಳೆ.

ಗಾಜಾದ ಆಸ್ಪತ್ರೆಯಲ್ಲಿ 3 ಗಂಟೆಗಳ ಕಾಲ ನನ್ನ ಕೈಗೆ ಶಸ್ತ್ರಚಕಿತ್ಸೆ ಮಾಡಿಸಿಕೊಂಡಿದ್ದೇನೆ. ನನಗೆ ಔಷಧಿಗಳ ನೀಡುತ್ತಿದ್ದಾರೆ. ಎಲ್ಲವೂ ಸರಿಯಾಗಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.

ಇತ್ತೀಚಿನ ಸುದ್ದಿ