ಉತ್ತರ ಪ್ರದೇಶದಲ್ಲಿ ರಾಮ ರಾಜ್ಯವಿಲ್ಲ, ಕೊಲೆಗಡುಕ ಸರ್ಕಾರವಿದೆ: ಮಮತಾ ಬ್ಯಾನರ್ಜಿ ಕಿಡಿ
ಕೋಲ್ಕತ್ತ: ದೇಶದಲ್ಲಿ ನಿರಂಕುಶ ಪ್ರಭುತ್ವ ಅಸ್ತಿತ್ವದಲ್ಲಿದ್ದು, ಉತ್ತರ ಪ್ರದೇಶದಲ್ಲಿ ಕೊಲೆಗಡುಕ ಸರ್ಕಾರವಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದು, ಲಖಿಂಪುರ್ ಖೇರಿ ಘಟನೆಯನ್ನು ಉಲ್ಲೇಖಿಸಿ ಅವರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಇಂದು ನಡೆಯುತ್ತಿರುವ ಘಟನೆಗಳು ಪ್ರಜಾಪ್ರಭುತ್ವವನ್ನು ಬಿಂಬಿಸುತ್ತಿಲ್ಲ. ಬದಲಿಗೆ ನಿರಂಕುಶ ಪ್ರಭುತ್ವ ಇರುವುದನ್ನು ಸಾಬೀತುಪಡಿಸಿವೆ. ಸತ್ಯಾಂಶ ಜನರಿಗೆ ತಿಳಿಯುವುದು ಬಿಜೆಪಿಯವರಿಗೆ ಬೇಕಿಲ್ಲ. ಅದಕ್ಕಾಗಿಯೇ ಅವರು ಅಲ್ಲಿ ಸೆಕ್ಷನ್ 144 ಹೇರಿದ್ದಾರೆ. ಮುಂಬರುವ ದಿನಗಳಲ್ಲಿ ಅವರ ಮೇಲೆ ಜನರೇ ಸೆಕ್ಷನ್ 144 ಹೇರಬೇಕಿದೆ. ಅವರು ಸ್ಥಳೀಯರನ್ನು ಭೇಟಿ ಮಾಡದಂತೆ ನಿಯೋಗಗಳನ್ನು ತಡೆಯುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಒತ್ತಾಯಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ರಾಮ ರಾಜ್ಯವಿಲ್ಲ, ಕೊಲೆಗಡುಕ ಸರ್ಕಾರವಿದೆ ಎಂದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ಈ ಬಾರಿಯೂ ಸಿಗಲಿಲ್ಲ ಬಿಜೆಪಿ ಟಿಕೆಟ್: ಮಹತ್ವದ ತೀರ್ಮಾನ ಕೈಗೊಂಡ ಪ್ರಮೋದ್ ಮುತಾಲಿಕ್
ಅಕ್ಟೋಬರ್ 5ರಂದು ಮೈಸೂರಿನಲ್ಲಿ ‘ಮಹಿಷ ದಸರಾ’ | ಅನುಮತಿ ನೀಡದ ಜಿಲ್ಲಾಡಳಿತ!
ಬಿಜೆಪಿ ತನ್ನ ತಾಲಿಬಾನಿ ಮನಸ್ಥಿತಿಯನ್ನು ಬೆತ್ತಲು ಮಾಡಿಕೊಂಡಿದೆ | ಯೋಗಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗು
ಜ್ಯೂಸ್ ಎಂದು ಭಾವಿಸಿ ತಾತನ ಬ್ರಾಂಡಿ ಕುಡಿದ 5 ವರ್ಷದ ಬಾಲಕ, ತಾತ ಇಬ್ಬರೂ ಸಾವು
ಬಿಜೆಪಿ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಬ್ರಿಟಿಷರು ಕೂಡ ಮಾಡಿರಲಿಲ್ಲ | ಅಖಿಲೇಶ್ ಯಾದವ್
ಪ್ರವಾದಿಯ ಅವಹೇಳನಾಕಾರಿ ವ್ಯಂಗ್ಯ ಚಿತ್ರ ಬಿಡಿಸಿದ್ದ ವಿವಾದಿತ ಕಲಾವಿದ ಅಪಘಾತದಲ್ಲಿ ಸಾವು!