ಬಿಜೆಪಿ ಭಾರತದ ಕ್ರಿಕೆಟ್ ಜರ್ಸಿಯನ್ನು ಕೇಸರೀಕರಣಗೊಳಿಸುತ್ತಿದೆ: ಮಮತಾ ಬ್ಯಾನರ್ಜಿ ಆರೋಪ

ಬಿಜೆಪಿ ಪಕ್ಷದ ವಿರುದ್ಧ ಹೊಸ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಎಲ್ಲವೂ ಕೇಸರಿ ಬಣ್ಣಕ್ಕೆ ತಿರುಗಿದೆ” ಎಂದು ಭಾರತೀಯ ಕ್ರಿಕೆಟ್ ತಂಡದ ಅಭ್ಯಾಸ ಜರ್ಸಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.
“ಈಗ ಎಲ್ಲವೂ ಕೇಸರಿ ಬಣ್ಣಕ್ಕೆ ತಿರುಗುತ್ತಿದೆ. ನಮ್ಮ ಭಾರತೀಯ ಆಟಗಾರರ ಬಗ್ಗೆ ನಮಗೆ ಹೆಮ್ಮೆ ಇದೆ. ಅವರು ವಿಶ್ವ ಚಾಂಪಿಯನ್ ಆಗುತ್ತಾರೆ ಎಂದು ನಾನು ನಂಬುತ್ತೇನೆ. ಆದರೆ ಅವರು ಅಭ್ಯಾಸ ಮಾಡುವಾಗ ಅವರ ಉಡುಪನ್ನು ಸಹ ಕೇಸರಿ ಬಣ್ಣಕ್ಕೆ ತಿರುಗಿಸಲಾಗಿದೆ. ಅವರು ಈ ಹಿಂದೆ ನೀಲಿ ಬಣ್ಣವನ್ನು ಧರಿಸುತ್ತಿದ್ದರು” ಎಂದು ಮಮತಾ ಬ್ಯಾನರ್ಜಿಯವರು ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಮೆಟ್ರೋ ನಿಲ್ದಾಣಗಳಿಗೂ ಕೇಸರಿ ಬಣ್ಣ ಬಳಿಯಲಾಗುತ್ತಿದೆ. ಒಮ್ಮೆ ಮಾಯಾವತಿ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ ಎಂದು ನಾನು ಕೇಳಿದ್ದೆ. ಆದರೆ ಈಗ ಇದು ಸಾಮಾನ್ಯವಾಗಿದೆ. ಈಗ ಎಲ್ಲದಕ್ಕೂ ನಮೋ ಹೆಸರಿಡಲಾಗುತ್ತಿದೆ” ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು.
ಟೀಮ್ ಇಂಡಿಯಾದ ಮ್ಯಾಚ್ ಜರ್ಸಿ ನೀಲಿ ಬಣ್ಣದ್ದಾಗಿದೆ ಎಂಬುದನ್ನು ಗಮನಿಸಬೇಕು. ಅಭ್ಯಾಸದ ಅವಧಿಯಲ್ಲಿ ತಂಡವು ಕಿತ್ತಳೆ ಕಿಟ್ ಅನ್ನು ಧರಿಸುತ್ತದೆ ಎಂದರು.