ಗ್ಯಾಸ್ ಕಟರ್ ಬಳಸಿ ಎಟಿಎಂ ಒಡೆದು 18 ಲಕ್ಷ ರೂ. ದೋಚಿದ ಕಳ್ಳರು!

ಕಲಬುರಗಿ: ಎಟಿಎಂನ್ನು ಗ್ಯಾಸ್ ಕಟರ್ ನಿಂದ ಕತ್ತರಿಸಿದ ಕಳ್ಳರು ಬರೋಬ್ಬರಿ 18 ಲಕ್ಷ ರೂಪಾಯಿಗಳನ್ನು ದೋಚಿರುವ ಘಟನೆ ಕಲಬುರಗಿಯ ರಾಮನಗರದ ಬಳಿಯ SBI ಎಟಿಎಂನಲ್ಲಿ ನಡೆದಿದೆ.
ಬ್ಯಾಂಕ್ ಸಿಬ್ಬಂದಿ ಬುಧವಾರ ಸಂಜೆ 3 ಗಂಟೆಯ ಸುಮಾರಿಗೆ ಎಟಿಎಂಗೆ ಹಣ ತುಂಬಿಸಿ ಹೋಗಿದ್ದರು. ಇಂದು ಮುಂಜಾನೆ ಎಟಿಎಂನಲ್ಲಿ ಸೆಕ್ಯೂರಿಟಿ ಇಲ್ಲದ ಸಮಯದಲ್ಲಿ ಕಳ್ಳರು ಎಟಿಎಂಗೆ ಕನ್ನ ಹಾಕಿದ್ದಾರೆ.
ಕಳ್ಳತನಕ್ಕೂ ಮುನ್ನ ಎಟಿಎಂನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳಿಗೆ ಬ್ಲಾಕ್ ಸ್ಪ್ರೇ ಮಾಡಿದ ಕಳ್ಳರು ಗ್ಯಾಸ್ ಕಟರ್ ಬಳಸಿ ಎಟಿಎಂ ಮೆಷಿನ್ ಒಡೆದಿದ್ದಾರೆ. ನಂತರ 18 ಲಕ್ಷ ರೂ. ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಐ20 ಕಾರಿನಲ್ಲಿ ಕಳ್ಳರು ಬಂದಿದ್ದಾರೆ ಎನ್ನಲಾಗಿದೆ. ಎಟಿಎಂ ಸಮೀಪದಲ್ಲಿರುವ ಸಿಸಿ ಟಿವಿ ಕ್ಯಾಮರಾದಲ್ಲಿ ಈ ಕಾರು ನಿಂತಿರುವ ದೃಶ್ಯ ಕಂಡು ಬಂದಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: