ಮಾದಪ್ಪನ ಬೆಟ್ಟದಲ್ಲಿ ವೃದ್ಧೆಗೆ ಪೊಂಗಲ್ ತಿನ್ನಿಸಿ ಹಣ, ಮೊಬೈಲ್ ದೋಚಿದ ಕಳ್ಳರು!
12/08/2023
ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ವೃದ್ಧೆಗೆ ಪೊಂಗಲ್ ತಿನ್ನಿಸಿ ಹಣ, ಮೊಬೈಲ್ ದೋಚಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು ಮೂಲದ ರತ್ಮಮ್ಮ(70) ವಂಚನೆಗೊಳಗಾದ ವೃದ್ಧೆ. ಮಲೆಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ರತ್ನಮ್ಮ ದೇವರ ದರ್ಶನ ಮುಗಿಸಿ ರಂಗಮಂದಿರದಲ್ಲಿ ಮಲಗಿದ್ದ ವೇಳೆ ಮೂವರು ಪುರುಷರು, ಓರ್ವ ಮಹಿಳೆ ಪರಿಚಯಿಸಿಕೊಂಡು ಜೊತೆಗೆ ಮಲಗಿದ್ದಾರೆ.
ಬೆಳಗ್ಗೆ ವೃದ್ಧೆ ಎದ್ದ ಬಳಿಕ ಪೊಂಗಲ್ ನಲ್ಲಿ ಮತ್ತು ಬರುವ ಔಷಧಿ ಬೆರೆಸಿಕೊಟ್ಟು ಪ್ರಜ್ಞೆ ತಪ್ಪಿಸಿ 10 ಸಾವಿರ ನಗದು, ಮೊಬೈಲ್ ಅನ್ನು ದೋಚಿ ಪರಾರಿಯಾಗಿದ್ದಾರೆ. ಸದ್ಯ, ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.