ಚಿರತೆಯನ್ನು ಸೆರೆ ಹಿಡಿಯಲು ಬೋನಿನಲ್ಲಿಟ್ಟಿದ್ದ ಮೇಕೆಯನ್ನು ಕದ್ದ ಕಳ್ಳರು! - Mahanayaka

ಚಿರತೆಯನ್ನು ಸೆರೆ ಹಿಡಿಯಲು ಬೋನಿನಲ್ಲಿಟ್ಟಿದ್ದ ಮೇಕೆಯನ್ನು ಕದ್ದ ಕಳ್ಳರು!

chamarajanagara
24/06/2023

ಚಾಮರಾಜನಗರ: ಚಿರತೆ ಸೆರೆಗಾಗಿ ಬೋನಿನಲ್ಲಿ  ಕಟ್ಟಿದ್ದ ಮೇಕೆಯನ್ನು ಕಳ್ಳರು ಹೊತ್ತೊಯ್ದಿರುವ ವಿಚಿತ್ರ ಗುಂಡ್ಲುಪೇಟೆ ತಾಲೂಕಿನ  ಚನ್ನವಡೆಯನಪುರ ಗ್ರಾಮದಲ್ಲಿ ನಡೆದಿದೆ.

ಗುಂಡ್ಲುಪೇಟೆ  ತಾಲೂಕಿನ‌ ಚನ್ನವಡೆಯಪುರ ಗ್ರಾಮದ ಬಳಿ ಚಿರತೆ ದಾಳಿ ನಡೆಸಿ ಕರು, ಕುರಿಗಳನ್ನು ಸಾಯಿಸಿತ್ತು. ಚಿರತೆ ಸೆರೆ ಹಿಡಿಯಲು ಗ್ರಾಮದ ರೈತರು ಒತ್ತಾಯಿಸಿದ್ದರು. ಅದರಂತೆ,

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ಅರಣ್ಯಾಧಿಕಾರಿಗಳು ಚಿರತ ಕುಮಾರ್ ಚಿರತೆ ಸೆರೆಗೆ ಬೋನು ಇರಿಸಿದ್ದರು.

ಸಂಜೆ ಬೋನಿಗೆ ಮೇಕೆ ಕಟ್ಟಿ ಅರಣ್ಯ ಇಲಾಖೆ ಸಿಬ್ಬಂದಿ ವಾಪಸ್ ಬಂದಿದ್ದರು. ಬೆಳಗ್ಗೆ ಬೋನಿನ ಹತ್ತಿರ ಹೋದಾಗ ಕಳ್ಳರ ಕೈ ಚಳಕದಿಂದ ಮೇಕೆ ಮಾಯವಾಗಿತ್ತು.

ಚಿರತೆ ಏನಾದರೂ ಮೇಕೆಯನ್ನು ಎಳೆದುಕೊಂಡು ಹೋಗಿದೆಯಾ ಎಂದ್ರೆ ಚಿರತೆ ಬಂದಿದ್ದ ಕುರುಹು ಕೂಡ ಇಲ್ಲದಿದ್ದರಿಂದ ಕಳ್ಳರು ಮೇಕೆಯನ್ನು ಬಿಚ್ಚಿಕೊಂಡು ಹೋಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ‌

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ