ಉಗ್ರರ ಅಟ್ಟಹಾಸಕ್ಕೆ  ನಲುಗಿದ ಅಫ್ಘಾನಿಸ್ತಾನ | ಪ್ರಾಣ ಉಳಿಸಿಕೊಳ್ಳಲು ವಿಮಾನದ ಟಯರ್ ಏರಿದವರ ದುರಂತ ಅಂತ್ಯ - Mahanayaka
3:13 PM Wednesday 5 - February 2025

ಉಗ್ರರ ಅಟ್ಟಹಾಸಕ್ಕೆ  ನಲುಗಿದ ಅಫ್ಘಾನಿಸ್ತಾನ | ಪ್ರಾಣ ಉಳಿಸಿಕೊಳ್ಳಲು ವಿಮಾನದ ಟಯರ್ ಏರಿದವರ ದುರಂತ ಅಂತ್ಯ

heartbreaking
16/08/2021

ಕಾಬೂಲ್:  ಅಫ್ಘಾನಿಸ್ತಾನ ತಾಲಿಬಾನಿಗಳ ವಶಕ್ಕೆ ಬರುತ್ತಿದ್ದಂತೆಯೇ ಅಲ್ಲಿನ ನಾಗರಿಕರು ನಡುಗಿ ಹೋಗಿದ್ದು, ಅಫ್ಘಾನಿಸ್ತಾನದಿಂದ ಓಡಿ ಹೋಗಿ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಕಾಬುಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲು ಆರಂಭವಾಗಿದೆ. ಇದೇ ಸಂದರ್ಭದಲ್ಲಿ ಚಲಿಸುತ್ತಿದ್ದ ವಿಮಾನದಿಂದ ಬಿದ್ದು ಇಬ್ಬರು ಕೆಳಗೆ ಬಿದ್ದಿದ್ದಾರೆ.

ಅಫ್ಘಾನಿಸ್ತಾನ ತೊರೆಯಲು ಸಿಕ್ಕಿದ ವಿಮಾನಗಳನ್ನು ಇಲ್ಲಿನ ನಾಗರಿಕರು ಸಿಕ್ಕಿದ ವಿಮಾನಗಳನ್ನು ಏರುತ್ತಿದ್ದಾರೆ. ವಿಮಾನದಲ್ಲಿ  ಭರ್ತಿಯಾದ ಪರಿಣಾಮ  ಪ್ರಯಾಣಕ್ಕೆ ಅವಕಾಶಕ್ಕಾಗಿ ವಿಮಾನದ ಹಿಂದೆಯೇ ಓಡುತ್ತಿರುವ ನಾಗರಿಕರ ಸ್ಥಿತಿ ಹೃದಯ ವಿದ್ರಾವಕವಾಗಿದೆ.

ಇನ್ನೂ ವಿಮಾನ ಹತ್ತಲು ಯತ್ನಿಸಿ ವಿಫಲರಾಗಿದ್ದ ಇಬ್ಬರು ವ್ಯಕ್ತಿಗಳು ಟೈಯರ್ ನಲ್ಲಿ ಕುಳಿತು ಪ್ರಯಾಣಿಸಲು ಯತ್ನಿಸಿದ್ದು, ವಿಮಾನ ಆಗಸಕ್ಕೆ ಹಾರಿದ ನಂತರ ಭಾರೀ ಎತ್ತರದಿಂದ ಕೆಳಗೆ ಬೀಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನಷ್ಟು ಸುದ್ದಿಗಳು…

ಗದ್ದೆಗಿಳಿದು ನಾಟಿ ಮಾಡಿದ ಶೋಭಾ ಕರಂದ್ಲಾಜೆ | ಸಾಕು ಬಾರಕ್ಕೋ… ಎಂದ ಕಾರ್ಯಕರ್ತರು!

ಗಲಭೆ ಸೃಷ್ಟಿಸಲು ಮುಂದಾದರೆ, ಸಂವಿಧಾನ ಬದ್ಧವಾಗಿ ತಡೆಯಲು ಸಿದ್ಧ | ಸಂಘಪರಿವಾರಕ್ಕೆ ಪಿಎಫ್ ಐ ತಿರುಗೇಟು

ವೀರ ಸಾರ್ವರ್ಕರ್ ರಥಯಾತ್ರೆ ನಡೆಸುತ್ತೇವೆ ತಾಕತ್ ಇದ್ದರೆ ತಡೆಯಿರಿ | ಎಸ್ ಡಿಪಿಐಗೆ ಹಿಂದುತ್ವ ಸಂಘಟನೆಗಳ ಸವಾಲು

ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸದೊಳಗೆ ಮೊಬೈಲ್ ಬಳಕೆ ನಿಷೇಧ | ಕಾರಣ ಏನು ಗೊತ್ತಾ?

ಸ್ವಾತಂತ್ರ್ಯ ರಥ ತಡೆದು ಪ್ರತಿಭಟಿಸಿದ ಎಸ್ ಡಿಪಿಐ ಕಾರ್ಯಕರ್ತರು | ಸಾರ್ವರ್ಕರ್ ಫೋಟೋಗೆ ಬಳಸಿದ್ದಕ್ಕೆ ವಿರೋಧ

ಇತ್ತೀಚಿನ ಸುದ್ದಿ