ಈ ವೈರಲ್ ವಿಡಿಯೋದಲ್ಲಿರುವ ದಂಪತಿ ನೌಕಾಪಡೆ ಅಧಿಕಾರಿ ವಿನಯ್ ನರ್ವಾಲ್ ಮತ್ತು ಪತ್ನಿ ಅಲ್ಲ!

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಬಲಿಯಾದ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಪತ್ನಿ ಹಿಮಾಂಶಿ ಪಹಲ್ಗಾಮ್ ನಲ್ಲಿ ವಿನಯ್ ನರ್ವಾಲ್ ಸಾವಿಗೂ ಮುನ್ನ ನೃತ್ಯ ಮಾಡಿದ್ದರು ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದ್ರೆ ಈ ವಿಡಿಯೋ ಫೇಕ್ ಎಂದು ಆ ವಿಡಿಯೋದಲ್ಲಿರುವ ನಿಜವಾದ ದಂಪತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿದ್ದಾರೆ.
ಈ ವಿಡಿಯೋದಲ್ಲಿರುವವರು ವಿನಯ್ ನರ್ವಾಲ್ ಮತ್ತು ಪತ್ನಿ ಹಿಮಾಂಶಿ ಅಲ್ಲ, ನಮ್ಮ ವಿಡಿಯೋವನ್ನು ಯಾರೋ ದುರ್ಬಳಕೆ ಮಾಡಿಕೊಂಡಿದ್ದಾರೆ. ನಾವು ಜೀವಂತವಾಗಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.
ಕಾಶ್ಮೀರದ ಬೈಸರನ್ ಕಣಿವೆಯ ಕೋಕ್ ಸ್ಟುಡಿಯೋದಲ್ಲಿ ದಂಪತಿ ನೃತ್ಯ ಮಾಡುತ್ತಿರುವ 19 ನಿಮಿಷದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದು ಸಾವಿಗೂ ಮುನ್ನ ವಿನಯ್ ನರ್ವಾಲ್ ಮತ್ತು ಪತ್ನಿ ಹಿಮಾಂಶಿ ಜೊತೆಯಾಗಿ ನೃತ್ಯ ಮಾಡಿದ ವಿಡಿಯೋ ಎಂಬ ಶೀರ್ಷಿಕೆಯಡಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ನಾವು ಸುರಕ್ಷಿತರಾಗಿದ್ದೀವಿ, ಈ ವಿಡಿಯೋವನ್ನು ಹೇಗೆ ಈ ರೀತಿಯಾಗಿ ಬಳಕೆ ಮಾಡಲಾಗುತ್ತಿದೆ ಎಂದು ನಮಗೆ ತಿಳಿದಿಲ್ಲ. ಇದು ಹೃದಯ ವಿದ್ರಾವಕವಾಗಿದೆ. ಲೆಫ್ಟಿನೆಂಟ್ ನರ್ವಾಲ್ ಅವರ ಕುಟುಂಬಕ್ಕೆ ನಾವು ತೀವ್ರವಾದ ಸಂತಾಪವನ್ನು ಸೂಚಿಸುತ್ತೇವೆ. ದಯವಿಟ್ಟು ನಮ್ಮ ವಿಡಿಯೋವನ್ನು ದುರುಪಯೋಗ ಮಾಡುತ್ತಿರುವ ಯಾವುದೇ ಪೋಸ್ಟ್ ನ್ನು ನಮಗೆ ರಿಪೋರ್ಟ್ ಮಾಡಿ ಅಂತ ದಂಪತಿ ಮನವಿ ಮಾಡಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: