ರಾಜ್ಯಪಾಲರ ವಿರುದ್ಧ ವಾದಿಸಲು ಸಿಎಂ ಸಿದ್ದರಾಮಯ್ಯ ಪರ ವಕೀಲರು ಬಳಸಲಿದ್ದಾರಂತೆ ಈ ಅಸ್ತ್ರ! - Mahanayaka
7:47 PM Thursday 12 - December 2024

ರಾಜ್ಯಪಾಲರ ವಿರುದ್ಧ ವಾದಿಸಲು ಸಿಎಂ ಸಿದ್ದರಾಮಯ್ಯ ಪರ ವಕೀಲರು ಬಳಸಲಿದ್ದಾರಂತೆ ಈ ಅಸ್ತ್ರ!

siddaramaiah
18/08/2024

ಬೆಂಗಳೂರು: ಮುಡಾ ಹಗರಣ ಸಂಬಂಧ  ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್  ಪ್ರಾಸಿಕ್ಯೂಷನ್ ಆದೇಶ ನೀಡಿದ್ದಾರೆ. ಇದೇ ಸಂದರ್ಭದಲ್ಲಿ  ಸಿಎಂ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ಶಾಸಕರ ಬೆಂಬಲ ದೊರಕಿದ್ದು, ಬುಧವಾರ ಶಾಸಕಾಂಗ ಸಭೆ ಕೂಡ ಕರೆದಿದ್ದಾರೆ.

ಈ   ಪ್ರಕರಣಕ್ಕೆ ಸಂಬಂಧಿಸಿದಂತೆ  ವಾದಿಸಲು ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ದೆಹಲಿಯಿಂದ ಆಗಮಿಸಲಿದ್ದಾರೆ ಎನ್ನಲಾಗಿದೆ. ಕೇಂದ್ರ ಸರ್ಕಾರದ ಚೆಕ್ ಲಿಸ್ಟ್ ಎಂಬ ಅಸ್ತ್ರವನ್ನು ಮುಂದಿಟ್ಟುಕೊಂಡು ಸಿಎಂ ಪರ ವಕೀಲರು ವಾದ ಮಂಡಿಸಲಿದ್ದಾರೆ ಅಂತ ಹೇಳಲಾಗಿದೆ.

ಚೆಕ್​ ಲಿಸ್ಟ್​ ನಲ್ಲೇನಿದೆ?

ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಲು ಕೇಂದ್ರ ಸರ್ಕಾರವೇ 2021ರ ಸೆಪ್ಟೆಂಬರ್​​​​ ನಲ್ಲಿ ಚೆಕ್ ​ಲಿಸ್ಟ್ ಮಾಡಿದೆ. ಡಿಜಿ–ಐಜಿಪಿ ಮಟ್ಟದ ಅಧಿಕಾರಿಗಳೇ ಪ್ರಾಸಿಕ್ಯೂಷನ್​ ಗೆ ಕೇಳಬೇಕು. ಅಲ್ಲದೇ ಪ್ರಾಸಿಕ್ಯೂಷನ್ ​ಗೆ ನೀಡುವಾಗ ಯಾವುದಾದರೂ ತನಿಖಾ ವರದಿ ಇರಬೇಕು ಎಂಬುವುದನ್ನು ಕೇಂದ್ರ ಸರ್ಕಾರ ಚೆಕ್ ​ಲಿಸ್ಟ್ ಮಾಡಿದೆ. ಆದ್ರೆ, ಇದೀಗ ಸಿದ್ದರಾಮಯ್ಯನವರ ವಿರುದ್ಧ ಯಾವುದೇ ತನಿಖಾ ವರದಿ ಇಲ್ಲದೇ, ಆಧಾರವಿಲ್ಲದೇ ಪ್ರಾಸಿಕ್ಯೂಷನ್ ​ಗೆ ನೀಡಲಾಗಿದೆ ಎನ್ನಲಾಗಿದೆ.

ಖಾಸಗಿ ವ್ಯಕ್ತಿಗಳ ದೂರಿಗೆ ರಾಜ್ಯಪಾಲರು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ರಾಜ್ಯಪಾಲರೇ ತನಿಖಾಧಿಕಾರಿಯಂತೆ ವರ್ತಿಸಿದ್ದಾರೆ ಎನ್ನಲಾಗುತ್ತಿದೆ. 2021ರ ಸೆಪ್ಟೆಂಬರ್ ​​​​ನಲ್ಲಿ ಕೇಂದ್ರ ನೀಡಿರುವ ಚೆಕ್ ​ಲಿಸ್ಟ್​​ ಪಾಲನೆಯಾಗಿಲ್ಲ. ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್​​​​ ಕಾನೂನು ಬಾಹಿರ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ 17A ಎಸ್ ​ಒಪಿ ಉಲ್ಲಂಘನೆಯಾಗಿದೆ ಎಂದು ಹೇಳಲಾಗುತ್ತಿದೆ.

ಸುಪ್ರೀಂಕೋರ್ಟ್​ನ ಬೇರೆ ಬೇರೆ ಪ್ರಕರಣಗಳ ಉಲ್ಲೇಖಿಸಲಿದ್ದು, 7 ಪ್ರಕರಣಗಳಲ್ಲಿ ಕೋರ್ಟ್​ ಅಭಿಪ್ರಾಯಗಳ ಪ್ರಸ್ತಾಪಿಸಿ ಪ್ರಾಸಿಕ್ಯೂಷನ್​ ಗೆ ನೀಡುವ ನಿಯಮ ಇದಲ್ಲ ಎಂದು ವಾದಿಸಲು ಸಿಎಂ ಪರ ವಕೀಲರು ಹೋಮ್ ವರ್ಕ್ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ