“ಆ ತಜ್ಞ ಬೋ***ಮಕ್ಕಳ ಹೆಸರು ಹೇಳುತ್ತೀರಾ?” | ಮಂಗಳೂರಿನಲ್ಲಿ ನೈಟ್, ವೀಕೆಂಡ್ ಕರ್ಫ್ಯೂಗೆ ಜನಾಕ್ರೋಶ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರದ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರ ಹಾಗೂ ಕೊವಿಡ್ ತಾಂತ್ರಿಕ ಸಲಹಾ ಸಮಿತಿಯ ತಜ್ಞರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಇದರಿಂದಾಗಿ ಜನರು ಜೀವನದ ಮೇಲೆ ಮತ್ತೊಮ್ಮೆ ಹೊರೆ ಬಿದ್ದಿದೆ. ಹೀಗಾಗಿ ಮಂಗಳೂರಿನಾದ್ಯಂತ ಸರ್ಕಾರದ ಕ್ರಮದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.
ನಿನ್ನೆ ಮಂಗಳೂರಿನ ಸ್ಥಳೀಯ ಸುದ್ದಿವಾಹಿನಿಗಳು ಈ ಸಂಬಂಧ ನಡೆಸಿದ ಚರ್ಚಾ ಕಾರ್ಯಕ್ರಮಗಳಲ್ಲಿ ಸರ್ಕಾರದ ವಿರುದ್ಧ ಜನರು ತೀವ್ರವಾಗಿ ಆಕ್ರೋಶ ಹೊರ ಹಾಕಿದ್ದಾರೆ. ವ್ಯಕ್ತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿ, “ನೀವು ತಜ್ಞರು ಅಂತ ಹೇಳುತ್ತೀರಲ್ಲ, ಲಾಕ್ ಡೌನ್ ಗೆ ಕರೆಕೊಟ್ಟವರು ಆ ತಜ್ಞ ಬೋ**ಮಕ್ಕಳ ಹೆಸರು ಹೇಳುತ್ತೀರಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಮಹಿಳೆಯೊಬ್ಬರು ಚಾನೆಲ್ ವೊಂದರ ಜೊತೆಗೆ ಮಾತನಾಡುತ್ತಾ, ಸರ್ಕಾರ ಹಾಗೂ ಜನ ಪ್ರತಿನಿಧಿಗಳ ಕುಟುಂಬಸ್ಥರಿಗೆಲ್ಲ ಸೇರಿಸಿ ಬೈಯ್ಯುವ ಮೂಲಕ ತಮ್ಮೊಳಗೆ ಹೊತ್ತಿ ಉರಿಯುತ್ತಿರುವ ಆಕ್ರೋಶವನ್ನು ಹೊರ ಹಾಕಿರುವ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಆಸ್ತಿ ಸಿಕ್ಕಿದ ಬಳಿಕ ತಾಯಿ ಬೇಡವಾದಳು: ಮಕ್ಕಳಿಗೆ ತಕ್ಕ ಪಾಠ ಕಲಿಸಿದ ತಾಯಿ
ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂಗೆ ಸಚಿವರಿಂದಲೇ ವಿರೋಧ!
ಶಾಕಿಂಗ್ ನ್ಯೂಸ್: ಫಿರಾನಾ ಮೀನಿನ ದಾಳಿಗೆ 4 ಮಂದಿ ಸಾವು | ಹಲವರು ನಾಪತ್ತೆ
ಕಳೆದ 24 ಗಂಟೆಗಳಲ್ಲಿ 91,೦೦೦ ಹೊಸ ಕೊರೊನಾ ಕೇಸ್ ದಾಖಲು!
ಫುಡ್ ಡೆಲಿವರಿ ಬಾಯ್ ಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್: ವಿಡಿಯೋ ವೈರಲ್