ತ್ಯಾಜ್ಯ ವಸ್ತುಗಳಿಂದ ತಲೆಯೆತ್ತಿದ ದೈತ್ಯ ರಾಜಹಂಸ ಪ್ರತಿಮೆ!
ಮುಂಬೈ: ನವಿ ಮುಂಬೈನ ಜಲಾಶಯ ಪ್ರದೇಶಗಳು ಫ್ಲೆಮಿಂಗೊ ಸ್ವರ್ಗವಾಗಿದೆ. ಪ್ರತಿ ಬೇಸಿಗೆಯಲ್ಲಿ ಲಕ್ಷಾಂತರ ರಾಜಹಂಸಗಳು ಕಾಣಸಿಗುತ್ತವೆ.ಇಲ್ಲಿ ನೀವು ಮರಿ ಫ್ಲೆಮಿಂಗೋಗಳು ಪೂರ್ಣ ಪ್ರಬುದ್ಧತೆಯನ್ನು ತಲುಪುವುದನ್ನು ನೋಡಬಹುದು. ಬೂದು ಬಣ್ಣದಿಂದ ಗುಲಾಬಿ ಬಣ್ಣದ ಬೆಳವಣಿಗೆಯನ್ನು ಕಾಣಬಹುದು.
ನಗರ ಸ್ವಚ್ಛತೆಯ ಅಂಗವಾಗಿ ನವಿಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ ತ್ಯಾಜ್ಯ ವಸ್ತುಗಳಿಂದ ಎತ್ತರದ ಸುಂದರ ಶಿಲ್ಪವನ್ನು ತಯಾರಿಸಿದೆ.ನೆರೂಲ್ ನ ‘ಜ್ಯುವೆಲ್ ಆಫ್ ನವಿಮುಂಬಯಿ’ ಜಲಾಶಯದ ಬಳಿ ಬೃಹತ್ ರಾಜಹಂಸ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಅದೂ 10 ಜನರ ಎತ್ತರದಲ್ಲಿದೆ. ಈ ಪ್ರತಿಮೆಯು ನಿಖರವಾಗಿ 61 ಅಡಿ ಎತ್ತರ ವನ್ನು ಹೊಂದಿದೆ.
ಫ್ಲೆಮಿಂಗೊ ಶಿಲ್ಪವು “ಬೆಸ್ಟ್ ಆಫ್ ಇಂಡಿಯಾ ರೆಕಾರ್ಡ್ಸ್ “ಪುಸ್ತಕದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ತ್ಯಾಜ್ಯ ವಸ್ತುವಿನಿಂದ ಮಾಡಿದ ಭಾರತದ ಅತಿ ಎತ್ತರದ ಶಿಲ್ಪ ಎಂಬ ಹೆಗ್ಗಳಿಗೆಯನ್ನು ಈ ಪ್ರತಿಮೆಯು ಪಡೆದಿದೆ.ಈ ಶಿಲ್ಪದಲ್ಲಿ 1500 ಕೆಜಿ ಲೋಹವಿದೆ. ಜಲಾಶಯಗಳಲ್ಲಿರುವ ರಾಜಹಂಸಗಳ ಜೊತೆಗೆ ಈ ದೈತ್ಯ ರಾಜಹಂಸವೂ ನವಿಮುಂಬೈಗೆ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೆಜಿಎಫ್ ಚಿತ್ರದ ಪ್ರಭಾವದಿಂದ ಸಿಗರೇಟ್ ಸೇದಿದ ಬಾಲಕ ಅಸ್ವಸ್ಥ]
ರಾಜಕೀಯ ನಾಯಕರ ಭದ್ರತಾ ಬೆಂಗಾವಲು ಹಿಂಪಡೆದ ಪಂಜಾಬ್ ಸರ್ಕಾರ
100 ವರ್ಷಗಳಷ್ಟು ಹಳೆಯ ಮಸೀದಿಗಳ ರಹಸ್ಯ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ
ವಿದ್ಯಾರ್ಥಿ ಮೇಲೆ ಕಾಡು ಹಂದಿ ದಾಳಿ
ವಿದ್ಯಾರ್ಥಿ ಮೇಲೆ ಕಾಡು ಹಂದಿ ದಾಳಿ