ಆ 40 ಗಂಟೆಗಳು: ಅಮೆರಿಕದಲ್ಲಿನ ಭಯಾನಕ ದಿನವನ್ನು ನೆನೆದು ಕಣ್ಣೀರಿಟ್ಟ ಸಿಂಗ್!
![](https://www.mahanayaka.in/wp-content/uploads/2025/02/81df5d91a20eff552e91a1a094fa5216d47db05e363a9486e75bc5186dd63266.0.jpg)
ಆ 40 ಗಂಟೆಗಳನ್ನು ನಾವು ಬದುಕಿನಲ್ಲಿ ಎಂದು ಮರೆಯಲಾರೆವು. ಬಹುಶ ಇಂತಹ ಕಷ್ಟ ನರಕದಲ್ಲೂ ಇರಲಾರದು. ಈ 40 ಗಂಟೆಗಳ ಉದ್ದಕ್ಕೂ ನಮ್ಮ ಕೈಗಳಿಗೆ ಬೇಡಿ ತೊಡಿಸಲಾಗಿತ್ತು. ಸಂಕೋಲೆಯಿಂದ ಕಾಲನ್ನ ಬಿಗಿಯಲಾಗಿತ್ತು. ಕುಳಿತಲ್ಲಿಂದ ಎದ್ದು ಹೋಗಲೂ ಸಾಧ್ಯವಿಲ್ಲದಂತಹ ಸ್ಥಿತಿ ನಮ್ಮದಾಗಿತ್ತು. ಅತ್ತು ಕರೆದು ಅಧಿಕಾರಿಗಳ ಕೈ ಕಾಲು ಹಿಡಿದ ಬಳಿಕ ನಮ್ಮನ್ನು ವಾಶ್ ರೂಮ್ ಗೆ ಹೋಗಲು ಬಿಡಲಾಯಿತು ಎಂದು ಅಮೆರಿಕಾದಿಂದ ಗಡಿಪಾರುಗೊಂಡ 40 ವರ್ಷದ ಹರ್ವಿಂದರ್ ಸಿಂಗ್ ಹೇಳಿದ್ದಾರೆ.
ಸಾಕಷ್ಟು ಕನಸುಗಳೊಂದಿಗೆ ನಾನು ಅಮೆರಿಕಕ್ಕೆ ಪ್ರಯಾಣ ಬೆಳೆಸಿದೆ. ಆದರೆ ಒಂದೇ ದಿನದಲ್ಲಿ ಎಲ್ಲವೂ ತಾರು ಮಾರಾಯಿತು. ಮದುವೆಯಾಗಿ 13 ವರ್ಷಗಳಾಗಿವೆ. ಹಾಲು ಮಾರಾಟದ ಮೂಲಕ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಸಾಕುವುದು ತುಂಬಾ ಕಷ್ಟಕರವಾಗಿತ್ತು.. ಆ ಕಾರಣದಿಂದ ನನ್ನ ಕುಟುಂಬದ ಸಂಬಂಧಿಕರೋರ್ವರು ಅಮೆರಿಕದಲ್ಲಿ ಕೆಲಸ ಇದೆ ಎಂದು ಆಹ್ವಾನಿಸಿದ್ದರು. ನನ್ನದು ಎಂದು ಕೂಡ ಕಾನೂನು ಬಾಹಿರ ದಾರಿಯಾಗಿರಲಿಲ್ಲ. ನನ್ನ ಕುಟುಂಬದ ಆ ವ್ಯಕ್ತಿಗೆ 42 ಲಕ್ಷ ರೂಪಾಯಿಯನ್ನು ಪಾವತಿಸಿದ್ದೇನೆ. ನಮ್ಮ ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದ ಒಂದು ಎಕರೆ ಭೂಮಿಯನ್ನು ಮಾರಿ ಮತ್ತು ಬಡ್ಡಿಗೆ ಸಾಲವನ್ನ ಪಡೆದು ನಾನು ಅಮೆರಿಕಕ್ಕೆ ಯಾತ್ರೆ ಹೊರಟೆ. ಆದರೆ ತಾನು ವಂಚನೆಗೆ ಒಳಗಾಗಿದ್ದೇನೆ ಅನ್ನೋದು ಯಾತ್ರೆಯ ಮಧ್ಯೆ ಗೊತ್ತಾಯಿತು. ನಾನು ಅಮೆರಿಕಕ್ಕೆ ತಲುಪಲೇ ಇಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೀಗೆ ನನ್ನನ್ನು ಬೇರೆ ಬೇರೆ ಕಡೆಗೆ ವರ್ಗಾಯಿಸಲಾಯಿತು. ಎಂಟು ತಿಂಗಳ ಕಾಲ ನಾನು ಕಷ್ಟಕರ ಜೀವನವನ್ನು ನಡೆಸಿದೆ ಎಂದವರು ಹೇಳಿದ್ದಾರೆ. ತನ್ನ ಪತಿಯನ್ನು ವಂಚಿಸಿದ ಟ್ರಾವೆಲ್ ಏಜೆಂಟ್ ನ ವಿರುದ್ಧ ಅವರ ಪತ್ನಿ ಈ ಮೊದಲೇ ಪ್ರಕರಣ ದಾಖಲಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj