ಮಳೆಗಾಲದಲ್ಲಿ ಕರೆಂಟ್ ಹೋದ್ರೆ ಲೈನ್ ಮ್ಯಾನ್ ಗಳಿಗೆ ಬೈಯ್ಯುವವರು ಈ ದೃಶ್ಯ ನೋಡಲೇ ಬೇಕು!
ಚಿಕ್ಕಮಗಳೂರು: ಮಳೆಗಾಲದಲ್ಲಿ ಕರೆಂಟ್ ಹೋದ್ರೆ ಥೋ…. ಅಂತ ವಿದ್ಯುತ್ ಇಲಾಖೆಯವ್ರಿಗೆ ಬೈತೀರಾ..? 2–3 ದಿನ ಕರೆಂಟ್ ಬರ್ದಿದ್ರಂತು ಅವರ ಕಥೆ ಮುಗೀತು… ವಂಶವನ್ನೇ ಜಾಲಾಡಿರ್ತೀರಾ? ಆದ್ರೆ, ಈ ದೃಶ್ಯ ನೋಡಿದ್ರೆ ಕರೆಂಟ್ ಹೋದ್ರು ವಿದ್ಯುತ್ ಇಲಾಖೆಯವ್ರಿಗೆ ಯಾರೂ ಬೈಯಲ್ಲ.
ಮಳೆಗಾಲದಲ್ಲಿ ಪ್ರಕೃತಿ ಜೊತೆ ವಿದ್ಯುತ್ ಇಲಾಖೆಯವರ ಹೋರಾಟದ ಬದುಕು–ಸೇವೆ ಹೇಗಿರುತ್ತೆ ಗೊತ್ತಾ? ವಿದ್ಯುತ್ ಇಲಾಖೆಯವ್ರ ಅಂತಹದ್ದೊಂದು ಭಯಂಕರ ವಿಡಿಯೋ ಅವರ ಜೀವನ ಶೈಲಿಯನ್ನು ಪ್ರಕಟಿಸಿದೆ.
ಅಪಾಯ ಮಟ್ಟ ಮೀರಿ ಧುಮ್ಮಿಕ್ಕಿ ಹರಿಯೋ ಹಳದಲ್ಲಿ ಧುಮುಕಿ ಲೈನ್ ಎಳೀತಾರೆ ಸಿಬ್ಬಂದಿಗಳು, ಈ ದಡದಿಂದ ಆ ದಡಕ್ಕೆ ಸೊಂಟಕ್ಕೆ ವೈರ್ ಕಟ್ಕೊಂಡು ಈಜಿ ಆ ದಡ ಮುಟ್ಟುತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹುಯಿಗೆರೆ ಗ್ರಾಮಕ್ಕೆ ಕರೆಂಟ್ ಕೊಡಲು ಲೈನ್ ಮ್ಯಾನ್ ಪ್ರಕೃತಿ ಜೊತೆ ಹೋರಾಡುತ್ತಿರುವ ದೃಶ್ಯವಿದು.
ಲೈನ್ ಮೇಲೆ ಮರ ಬಿದ್ದು 3 ದಿನದಿಂದ ಕತ್ತಲಿನಲ್ಲಿದ್ದ ಹುಯಿಗೆರೆ ಗ್ರಾಮಕ್ಕೆ ಬೆಳಕು ನೀಡಲು ಲೈನ್ ಮ್ಯಾನ್ ರವಿಕುಮಾರ್ ಹಳ್ಳದಲ್ಲಿ ಈಜಿ ಹೋಗಿ ವಿದ್ಯುತ್ ದುರಸ್ಥಿಗೆ ಜೀವವನ್ನೇ ಪಣಕ್ಕಿಟ್ಟು ಹೋರಾಟ ನಡೆಸಿದರು. ಲೈನ್ ಮ್ಯಾನ್ ರವಿಯವರ ಈ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: