ವಿರೋಧ ಮಾಡಿದವರು ಬಿಜೆಪಿ ಪಕ್ಷದವರಲ್ಲ, ಬಿಎಸ್ ವೈ ನನ್ನನ್ನು ಸಮಾಧಾನ ಮಾಡಿದ್ರು: ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ

ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ನೀನೇ ಅಭ್ಯರ್ಥಿ, ನೀನೇ ಗೆಲ್ಲೋದು ಅಂತ ಯಡಿಯೂರಪ್ಪನವರು ನನಗೆ ಹೇಳಿದರು, ಇಲ್ಲಿ ನಡೆದಿರುವ ಘಟನೆಗೆ ನಾನು ಯಡಿಯೂರಪ್ಪನವರಿಗೆ ವಿಷಾಧ ಕೇಳುತ್ತೇನೆ ಎಂದು ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಮೂಡಿಗೆರೆಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪನವರ ಕಾರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಿ ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್ ನೀಡದಂತೆ ಪ್ರತಿಭಟನೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2000 ಸಾವಿರ ಇಸವಿಯಿಂದ ಇವರೆಲ್ಲ(ವಿರೋಧಿ ಬಣ) ಇದ್ದವರು. 2013ರಲ್ಲಿ ನಾನು ಮೈ ಮರೆತು 1000 ಮತಗಳಿಂದ ಸೋತೆ, ಆಗ ಇದ್ದವರು ಇವರೆ ಎಂದು ಅವರು ವಿರೋಧಿ ಬಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೂಡಿಗೆರೆಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಅದ್ಧೂರಿಯಾಗಿ ನಡೆದಿದೆ. ಕೆಲವರು ಬೇಕು ಎಂದೇ ಹೀಗೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪನವರು ನನ್ನನ್ನು 100 ಮೀಟರ್ ದೂರಕ್ಕೆ ಕರೆದೊಯ್ದು ಸಮಾಧಾನ ಮಾಡಿದ್ದಾರೆ. ಮೂಡಿಗೆರೆಗೆ ನೀನೆ ಅಭ್ಯರ್ಥಿ, ಗೆಲ್ಲೋದು ನೀನೆ ಎಂದಿದ್ದಾರೆ. ಪಕ್ಷಕ್ಕಾಗಿ ಹೋರಾಡುತ್ತೇನೆ, ನಾನು ಒಬ್ಬನೆ, ನನಗೆ ಹೆಂಡ್ತಿ, ಮಕ್ಕಳು ಇಲ್ಲ, ನಾನು ಏಕಾಂಗಿ. ಘಟನೆಯ ಬಗ್ಗೆ ಮಾಜಿ ಸಿಎಂ ಬಿ.ಎಸ್.ವೈಗೆ ವಿಷಾದ ಕೇಳುತ್ತೇನೆ ಎಂದು ಅವರು ಹೇಳಿದರು.
ಎಲ್ಲಾ ಚಾನೆಲ್ ಸರ್ವೇಗಳಲ್ಲೂ ಮೂಡಿಗೆರೆಯಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಇದೆ. ಅದಕ್ಕೆ ಸೋಲಿಸಬೇಕೆಂದು ಈ ಪ್ರಯತ್ನ ಮಾಡಿದ್ದಾರೆ. ಅಲ್ಲಿ ಪಕ್ಷದ ಹುದ್ದೆಯಲ್ಲಿ ಇದ್ದವರು ಯಾರೂ ಇಲ್ಲ, ಎಲ್ಲರೂ ಮನೆಯಿಂದ ಬಂದವರು, ಅವರು ಪಕ್ಷದವರಲ್ಲ ಯಡಿಯೂರಪ್ಪ, ಸದಾನಂದಗೌಡ ಎಲ್ಲರೂ ಬೇಜಾರು ಆಗಿದ್ದಾರೆ, ವಿಷಾದ ಕೇಳುತ್ತೇನೆ ಎಂದು ಪುನರುಚ್ಚರಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw