ತೋಟದ ಮನೆಗಳ ಸಮೀಪವೇ ಮರಿ ಹಾಕಿದ ಚಿರತೆ: ಕ್ಯಾಮರಾ ಅಳವಡಿಸಿದ ಅರಣ್ಯ ಇಲಾಖೆ - Mahanayaka
2:24 AM Thursday 12 - December 2024

ತೋಟದ ಮನೆಗಳ ಸಮೀಪವೇ ಮರಿ ಹಾಕಿದ ಚಿರತೆ: ಕ್ಯಾಮರಾ ಅಳವಡಿಸಿದ ಅರಣ್ಯ ಇಲಾಖೆ

chirate
26/12/2022

ಚಾಮರಾಜನಗರ: ಚಿರತೆಯೊಂದು ತೋಟದ ಮನೆಗಳ ಸಮೀಪವೇ ಎರಡು ಮರಿಗಳನ್ನು ಹಾಕಿರುವ ಘಟನೆ ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಡುವ ಚಾಮರಾಜನಗರ ತಾಲೂಕಿನ ಕಟ್ನವಾಡಿ ಗ್ರಾಮದಲ್ಲಿ ನಡೆದಿದೆ.

ಕಟ್ನವಾಡಿ ಗ್ರಾಮದ ಗುರು ಎಂಬವರು ಕಬ್ಬಿನ ಫಸಲನ್ನು ಕಟಾವು ಮಾಡುವಾಗ 15–20 ದಿನಗಳ ಅವಧಿಯ ಎರಡು ಚಿರತೆ ಮರಿಗಳು ಪತ್ತೆಯಾಗಿದೆ. ವಿಚಾರ ತಿಳಿದ ಚಾಮರಾಜನಗರ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಚಿರತೆ ಮರಿಗಳನ್ನು ಜಮೀನಿನಲ್ಲೆ ಬಿಟ್ಟು ನಿಗಾ ಇಟ್ಟಿದ್ದಾರೆ.

ಚಿರತೆ ಮರಿ ಹಾಕಿರುವ ಸ್ಥಳದಿಂದ 70–100 ಮೀ. ಅಂತರದಲ್ಲೇ ತೋಟದ ಮನೆಗಳು, ಜನರ ಓಡಾಟ ಹೆಚ್ಚಿನ ಪ್ರದೇಶವಿದ್ದು ಮರಿಗಳನ್ನು ಹಾಕಿದ ಬಳಿಕವೂ ಚಿರತೆ ಜನರಿಗೆ ಕಾಣದಿರುವುದು  ಪವಾಡವೇ ಆಗಿದೆ‌.

ತಾಯಿ ಚಿರತೆ ಮರಿಗಳನ್ನು  ಕರೆದೊಯ್ಯಲಿದೆ ಎಂದು ಅರಣ್ಯ ಇಲಾಖೆಯು ಕ್ಯಾಮರಾಗಳನ್ನು ಅಳವಡಿಸಿ ನಿಗಾ ಇಟ್ಟಿದೆ‌‌. ಮರಿಗಳು ಪತ್ತೆಯಾದ ಬಳಿಕ ರೈತರು ಮರಿಗಳೊಟ್ಟಿಗೆ ಫೋಟೋ ಕ್ಲಿಕ್ಲಿಸಿಕೊಂಡು ಸಂಭ್ರಮಿಸಿದ್ದು ಫೋಟೋಗಳು ಸಖತ್ ವೈರಲ್ಲಾಗಿದೆ‌.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ