ಇಡೀ ತೋಟವನ್ನೇ ನಾಶ ಮಾಡಿದ ಆನೆ, ಪುಟ್ಟ ಹಕ್ಕಿ ಗೂಡು ಇದ್ದ ಬಾಳೆಗಿಡವನ್ನು ಬಿಟ್ಟು ಹೋಯಿತು!
ಚೆನ್ನೈ: ಮಾನವ ಒಬ್ಬ ಬಲಾತ್ಕಾರಿ ಎನ್ನುವುದು ಬಹುತೇಕ ಬಾರಿ ಸಾಬೀತಾಗಿದೆ. ಅದರಲ್ಲೂ ಮಾನವ ಪ್ರಕೃತಿಯ ಮೇಲೆ ನಡೆಸಿದ ಬಲಾತ್ಕಾರಕ್ಕೆ ಲೆಕ್ಕವೇ ಇಲ್ಲ. ಮರಗಳನ್ನು ಕಡಿದು, ಪ್ರಾಣಿ ಪಕ್ಷಿಗಳನ್ನು ನಾಶ ಮಾಡುವುದನ್ನು ಫನ್ ಎಂದೇ ಭಾವಿಸಿಕೊಂಡಿರುವ ಮನುಷ್ಯ, ಸ್ವಯಂ ಘೋಷಿತ ಬುದ್ಧಿವಂತ ಜೀವಿಯಾಗಿದ್ದಾನೆ. ಇದೀಗ ತಮಿಳುನಾಡಿನಲ್ಲಿ ನಡೆದ ಅಪರೂಪದ ಘಟನೆಯೊಂದು, ಮಾನವ ಕುಲವನ್ನೇ ನಾಚಿ ತಲೆ ಬಗ್ಗಿಸುವಂತೆ ಮಾಡಿದೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಳ ಎಂಬಲ್ಲಿನ ವಿಲ್ಮುಂಡಿ ಕಾಡಿನಿಂದ ಐದು ಕಾಡಾನೆಗಳು ನಾಡಿಗೆ ಬಂದಿದ್ದು, ಕೃಷ್ಣಸ್ವಾಮಿ ಎಂಬವರ ಬಾಳೆ ತೋಟಕ್ಕೆ ನುಗ್ಗಿದೆ. ತೋಟದಲ್ಲಿ ಸೊಗಸಾಗಿ ಬೆಳೆದಿದ್ದ 300ಕ್ಕೂ ಅಧಿಕ ಬಾಳೆ ಗಿಡಗಳನ್ನು ಆನೆ ಹಿಂಡು ಧ್ವಂಸ ಮಾಡಿದೆ. ಆದರೆ ಒಂದು ಬಾಳೆ ಗಿಡವನ್ನು ಮಾತ್ರವೇ ಬಿಟ್ಟು ಬೇರೆಲ್ಲ ಗಿಡವನ್ನು ನಾಶ ಮಾಡಿತ್ತು.
ಇಡೀ ತೋಟದಲ್ಲಿರುವ ಎಲ್ಲ ಬಾಳೆ ಗಿಡಗಳನ್ನು ನಾಶ ಮಾಡಿದ್ದ ಆನೆ ಒಂದು ಗಿಡಕ್ಕೆ ಸ್ವಲ್ಪವೂ ಹಾನಿ ಮಾಡದೇ ಬಿಟ್ಟಿರುವುದನ್ನು ನೋಡಿ ಅಚ್ಚರಿಗೊಂಡು ನೋಡಿದಾಗ ಆ ಗಿಡದಲ್ಲಿ ಹಕ್ಕಿಯೊಂದು ಗೂಡು ಕಟ್ಟಿದ್ದು, ಹಕ್ಕಿಯ ಮರಿಗಳು ಗೂಡಿನಲ್ಲಿದ್ದವು.
ಪುಟ್ಟ ಪುಟ್ಟ ಹಕ್ಕಿಯ ಮರಿಗಳನ್ನು ನೋಡಿ ಆನೆಯ ಹೃದಯವೂ ಕರಗಿತು. ಮನುಷ್ಯರು ಯಾವುದಾದರೂ ಸೈಟ್ ಗಳ ನಿರ್ಮಾಣಕ್ಕಾಗಿ ಮರಗಳನ್ನು ಕತ್ತರಿಸುತ್ತಿದ್ದರೆ, ಸ್ವಲ್ಪವೂ ಕರುಣೆಯೇ ಇಲ್ಲದೇ ಎಲ್ಲವನ್ನು ಕತ್ತರಿಸಿ ಹಾಕುತ್ತಿದ್ದರು. ಗೂಡುಗಳು ಪತ್ತೆಯಾಗುತ್ತಿದ್ದರೆ, ಗೂಡಿನ ಸಮೇತ ಮರಿಗಳನ್ನು ಎಸೆಯುತ್ತಿದ್ದರು. ಮಾನವೀಯತೆ ಎನ್ನುವ ಪದಕ್ಕೆ ಆನೆಗಳ ತಂಡ ಅರ್ಥ ನೀಡಿ ಹೋಗಿದೆ.
2020ರಂದು ಕೇರಳದ ಪಾಲಕ್ಕಾಡ್ ನಲ್ಲಿ ಆಹಾರ ಹುಡುಕಿಕೊಂಡು ಕಾಡಿನಿಂದ ಬಂದಿದ್ದ ಗರ್ಭಿಣಿ ಆನೆಗೆ ಸ್ಫೋಟಕವನ್ನು ತಿನ್ನಿಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆಗಳು ಮಾನವೀಯತೆ ಎಂದರೇನು ಎಂದು ಪ್ರಶ್ನೆ ಮಾಡಿತ್ತು. ಇದೀಗ ಆನೆಗಳು ಅದಕ್ಕೆ ಉತ್ತರ ನೀಡಿ ಹೋಗಿವೆ ಎನ್ನುವಂತೆ ಭಾಸವಾಗಿದೆ.
ಇನ್ನಷ್ಟು ಸುದ್ದಿಗಳು…
ಬಿಜೆಪಿ ಆಡಳಿತದಲ್ಲಿಯೇ ದೇವಸ್ಥಾನ ನೆಲಸಮ: ಬೇರೆ ಸರ್ಕಾರ ಇದ್ದಿದ್ದರೆ ನಡೆಯುತ್ತಿದ್ದದ್ದೇ ಬೇರೆ!
ಸ್ಕೂಟಿಯಲ್ಲಿ ಪ್ರಯಾಣಿಸುತ್ತಿರುವ ವೇಳೆಯೇ ಪತ್ನಿಯನ್ನು ಇರಿದು ಕೊಂದ ಪತಿ!
ಬೈಕ್ ಸ್ಕಿಡ್ ಆಗಿ ಖ್ಯಾತ ನಟನಿಗೆ ಗಂಭೀರ ಗಾಯ: ಅಪೋಲೊ ಆಸ್ಪತ್ರೆಗೆ ದೌಡಾಯಿಸಿದ ಹಿರಿಯ ನಟರು
ಬಾಗಿಲು ಮುಚ್ಚಿದ ಕಾರು ತಯಾರಿಕಾ ‘ಫೋರ್ಡ್’ ಸಂಸ್ಥೆ | ಎಷ್ಟು ಉದ್ಯೋಗಿಗಳು ನಿರುದ್ಯೋಗಿಗಳಾಗಲಿದ್ದಾರೆ ಗೊತ್ತಾ?
ಆ್ಯಂಕರ್ ಅನುಶ್ರೀ ವಿರುದ್ಧ ದಾಖಲೆ ರಹಿತ ಆರೋಪ | ಪ್ರಶಾಂತ್ ಸಂಬರ್ಗಿಯ ಬೆವರಳಿಸಿದ ಚಕ್ರವರ್ತಿ ಚಂದ್ರಚೂಡ್