11:34 AM Wednesday 12 - March 2025

ಹಿಂದೂ ಧರ್ಮಕ್ಕೆ ಅಪಾಯ ಇದೆ ಎನ್ನುವುದು ಕಾಲ್ಪನಿಕ: ಕೇಂದ್ರ ಸರ್ಕಾರ ಸ್ಪಷ್ಟನೆ

amith shah
21/09/2021

ನವದೆಹಲಿ:  ಹಿಂದೂ ಧರ್ಮಕ್ಕೆ ಬೆದರಿಕೆ ಇದೆ ಎಂಬ ಮಾತು ಕೇವಲ ಕಾಲ್ಪನಿಕ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಹಿಂದೂ ಧರ್ಮ ಅಪಾಯದಲ್ಲಿದೆ ಎಂಬ ಮಾತನ್ನು ತಳ್ಳಿಹಾಕಿದ್ದು, ಇದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿದೆ.

ಮಾಹಿತ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಕೇಂದ್ರ ಸರ್ಕಾರ ಈ ಉತ್ತರವನ್ನು ನೀಡಿದ್ದು, ಹಿಂದೂ ಧರ್ಮಕ್ಕೆ ಬೆದರಿಕೆಯಿದೆ ಎಂದು ಕಳವಳ ವ್ಯಕ್ತಪಡಿಸುವ ಯಾವುದೇ ದಾಖಲೆಗಳಾಗಲಿ, ಸಾಕ್ಷಿಗಳಾಗಲಿ ಸಿಕ್ಕಿಲ್ಲ. ಈ ಆಪಾದನೆಯನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿದೆ.

ನಾಗ್ಪುರದ ಕಾರ್ಯಕರ್ತ ಮೊಹ್ನೀಶ್ ಜಬಲ್‌ ಪುರೆ ಅವರು ಕಳೆದ ಆಗಸ್ಟ್ 31 ರಂದು ಸಲ್ಲಿಸಿದ ಆರ್‌ ಟಿಐ ಅರ್ಜಿಗೆ ಸಚಿವಾಲಯ  ಈ ಉತ್ತರ ನೀಡಿದೆ. ಹಿಂದೂ ಧರ್ಮದ ಬೆದರಿಕೆಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಯು ಕಾಲ್ಪನಿಕ ಎಂದು ಹೇಳಿರುವುದು ಇದೇ ಮೊದಲು. ಅಂತಹ ಯಾವುದೇ ಊಹೆಯನ್ನು ಬೆಂಬಲಿಸಲು ಯಾವುದೇ ದಾಖಲೆಗಳಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಜಬಲ್‌ಪುರೆ ಸರ್ಕಾರದ ಪ್ರತಿಕ್ರಿಯೆ ಪಡೆದ ಬಳಿಕ ಹೇಳಿದ್ದಾರೆ.

ಬಿಜೆಪಿ ಅಂಗವಾಗಿ ಕಾರ್ಯಾಚರಿಸುತ್ತಿರುವ ಕೆಲವು ಸಂಘಟನೆಗಳ ನಾಯಕರು, ರಾಜಕೀಯ ಸಮಾವೇಶಗಳು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಹಿಂದೂ ಧರ್ಮಕ್ಕೆ ಅಪಾಯವಿದೆ ಎಂದು ಹೇಳಿಕೆ ನೀಡುತ್ತಿದ್ದು, ಈ ಸಂಬಂಧ ಕೇಂದ್ರ ಗೃಹ ಸಚಿವಾಲಯಕ್ಕೆ ಕೇಳಿರುವ ಪ್ರಶ್ನೆಗೆ ಸಚಿವಾಲಯವು ಇದು ಕಾಲ್ಪನಿಕ, ಇದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on

ಇನ್ನಷ್ಟು ಸುದ್ದಿಗಳು…

ಮಠದಲ್ಲಿಯೇ ಸ್ವಾಮೀಜಿಯ ಮರ್ಡರ್!? | ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿಯ ಮೃತದೇಹ ಪತ್ತೆ

ನಾನು ಎರಡು ಬಾರಿ ರಾಜ್ಯಸಭಾ ಸ್ಥಾನವನ್ನು ನಿರಾಕರಿಸಿದ್ದೇನೆ | ನಟ ಸೋನು ಸೂದ್‌

ಬೈಕ್ ನಲ್ಲಿ ಜೊತೆಯಾಗಿ ಪ್ರಯಾಣಿಸಿದ ಅನ್ಯಧರ್ಮೀಯ ಯುವಕ, ಯುವತಿಯ ಮೇಲೆ ದುಷ್ಕರ್ಮಿಗಳಿಂದ ದಾಳಿ

ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊಲೆ ಬೆದರಿಕೆ: ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅರೆಸ್ಟ್

ಮಗಳನ್ನು ಚುಡಾಯಿಸಬೇಡ ಎಂದಿದ್ದಕ್ಕೆ ಬಾಲಕಿಯ ತಂದೆಗೆ ಮಾರಣಾಂತಿಕ ಹಲ್ಲೆ!

ಒಂದೇ ಕುಟುಂಬದ ಐವರು ಆತ್ಮಹತ್ಯೆ: ಮನೆಯೊಳಗೆ ಒಬ್ಬಂಟಿಯಾಗಿತ್ತು 3 ವರ್ಷದ ಮಗು!

ಇತ್ತೀಚಿನ ಸುದ್ದಿ

Exit mobile version