ಖರ್ಗೆ ಹಾಗೂ ಕುಟುಂಬಕ್ಕೆ ಬೆದರಿಕೆ ವಿಚಾರ: ಪಟ್ನಾದಲ್ಲೂ ಪ್ರಕರಣ ದಾಖಲು - Mahanayaka
8:06 PM Wednesday 11 - December 2024

ಖರ್ಗೆ ಹಾಗೂ ಕುಟುಂಬಕ್ಕೆ ಬೆದರಿಕೆ ವಿಚಾರ: ಪಟ್ನಾದಲ್ಲೂ ಪ್ರಕರಣ ದಾಖಲು

manikanta rathod
09/05/2023

ಪಾಟ್ನ: ಖರ್ಗೆ, ಹೆಂಡತಿ ಮಕ್ಕಳನ್ನು ಸಾಫ್‌ ಮಾಡ್ತೀನಿ… ಎಂದು ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅವರು ಹೇಳಿದ್ದಾರೆ ಎನ್ನಲಾದ ಆಡಿಯೊ ಸಂಬಂಧ ಪಟ್ನಾದಲ್ಲೂ ಪ್ರಕರಣ ದಾಖಲಾಗಿದೆ.

ಬಿಹಾರ ಕಾಂಗ್ರೆಸ್‌ ಘಟಕವು ಪೊಲೀಸರಿಗೆ ಈ ಸಂಬಂಧ ದೂರು ದಾಖಲಿಸಿದ್ದು, ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬವನ್ನು ಮುಗಿಸುವ ಉದ್ದೇಶವನ್ನು ವ್ಯಕ್ತಪಡಿಸಿರುವುದು ಖಂಡನೀಯ. ನಾವು ಈ ಬಗ್ಗೆ ಎಫ್‌ ಐಆರ್ ದಾಖಲಿಸಿದ್ದೇವೆ ಎಂದು ಕಾಂಗ್ರೆಸ್ ನಾಯಕ ಅಜಿತ್ ಶರ್ಮಾ ಹೇಳಿದ್ದಾರೆ.

ಮಣಿಕಂಠ ರಾಠೋಡ್‌ ಅವರು ವ್ಯಕ್ತಿಯೊಬ್ಬರಿಗೆ ಫೋನ್‌ ಸಂಭಾಷಣೆ ವೇಳೆ ಹೇಳಿದ್ದಾರೆ ಎನ್ನಲಾದ ಮಾತು ದೇಶದಾದ್ಯಂತ ವಿವಾದ ಸೃಷ್ಟಿ ಮಾಡಿದೆ.  ಇದು ತಿರುಚಿದ ಆಡಿಯೊ ಎಂದು ಬಿಜೆಪಿ ಪ್ರತಿಪಾದಿಸಿದ್ದು, ಈ ಸಂಬಂಧ ದೂರನ್ನೂ ದಾಖಲಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ