ಯುಪಿಯ ಆರ್ ಎಸ್ ಎಸ್ ಕಚೇರಿ ಗೇಟ್ ಬಳಿ ಮೂತ್ರ ವಿಸರ್ಜನೆ: ಹಿಂಸೆಗೆ ತಿರುಗಿದ ಘಟನೆ

03/08/2023

ಉತ್ತರ ಪ್ರದೇಶದ ಷಹಜಹಾನ್‌ಪುರದಲ್ಲಿರುವ ಆರ್ ಎಸ್ಎಸ್ ಕಚೇರಿ ಗೇಟ್ ಬಳಿ ವ್ಯಕ್ತಿಯೋರ್ವ ಮೂತ್ರ ವಿಸರ್ಜನೆ ಮಾಡಿದ್ದಾರೆ ಎನ್ನಲಾಗಿದೆ. ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯೊಂದಿಗೆ ಇನ್ನೂ 3-4 ಜನರಿದ್ದರು ಎಂದು ಎಸ್ ಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಅಲ್ಲದೇ ಆರ್ ಎಸ್ಎಸ್ ಕಾರ್ಯಕರ್ತರು ಕಚೇರಿಯ ಗೇಟ್ ಬಳಿ ಮೂತ್ರ ವಿಸರ್ಜನೆ ಮಾಡಿದ್ದನ್ನು ವಿರೋಧಿಸಿದ್ದಕ್ಕೆ ಜನರ ತಂಡವೊಂದು ಕಲ್ಲು ತೂರಾಟ ನಡೆಸಿ ಗುಂಡಿನ ದಾಳಿ ನಡೆಸಿದೆ.

ಕಾರ್ಯಕರ್ತರು ಈ ವಿಕೃತಿಯನ್ನು ವಿರೋಧಿಸಿದ ಬೆನ್ನಲ್ಲೇ ವಾಗ್ವಾದ ಆರಂಭವಾಗಿದ್ದು, ತಕ್ಷಣವೇ 50 ಮಂದಿ ಆ ಸ್ಥಳದಲ್ಲಿ ಜಮಾಯಿಸಿದರು ಎಂದು ಕುಮಾರ್ ಮಾಹಿತಿ ನೀಡಿದ್ದಾರೆ.

ಆರ್ ಎಸ್ಎಸ್ ಪದಾಧಿಕಾರಿ ರವಿ ಮಿಶ್ರಾ ಈ ಘಟನೆಯ ಬಗ್ಗೆ ಮಾತನಾಡಿ, ಆರೋಪಿಗಳ ಪೈಕಿ ಒಂದಷ್ಟು ಜನರು ಕಲ್ಲು ತೂರಾಟ ನಡೆಸಿದ್ದು, ಕಚೇರಿಯತ್ತ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಕಾರ್ಯಕರ್ತರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಹೇಳಿದ್ದಾರೆ.

ಘಟನೆಯ ನಂತರ ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
40-50 ಮಂದಿ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದ್ದು, ಹತ್ಯೆ ಯತ್ನ ಆರೋಪ ಹೊರಿಸಲಾಗಿದೆ ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version