ಕೆ.ಗುಡಿಯಲ್ಲಿ ಮೂರು ವ್ಯಾಘ್ರಗಳು ಫೋಟೊಗೆ ಪೋಸ್
![tiger in k gudi](https://www.mahanayaka.in/wp-content/uploads/2023/03/tiger-in-k-gudi.jpg)
ಚಾಮರಾಜನಗರ: ಕರ್ನಾಟಕದ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಚಾಮರಾಜನಗರ ತಾಲೂಕಿನ ಕೆ.ಗುಡಿಯಲ್ಲಿ ಒಂದಲ್ಲ ಎರಡಲ್ಲ ಮೂರು ಹುಲಿಗಳು ಒಟ್ಟೊಟ್ಟಿಗೆ ದರ್ಶನ ನೀಡಿವೆ.
ಇಂದು ಬೆಳಗ್ಗಿನ ಸಫಾರಿಗೆ ತೆರಳಿದ್ದವರು ಮುದಗೊಂಡಿದ್ದಾರೆ. ಸಫಾರಿಗೆ ತೆರಳಿದವರು ಆನೆ, ಕಾಡೆಮ್ಮೆ ಹಾಗೂ ಪಕ್ಷಿಗಳನ್ನು ನೋಡುತ್ತಿರುತ್ತಾರೆ. ಆದರೆ, ಕಾಡಿನ ರಾಜ ಹುಲಿಯನ್ನು ಕಾಣಕು ಹಾತೊರೆಯುತ್ತಿರುತ್ತಾರೆ.
ಅಂತಹದರಲ್ಲಿ ಒಟ್ಟಿಗೆ 3 ಹುಲಿಗಳನ್ನು ಇಂದು ಪ್ರವಾಸಿಗರು ಕಂಡಿದ್ದು ಬೇಸಿಗೆ ಕಾಲದಲ್ಲಿ ಕಣ್ಣಿಗೆ ತಂಪೆನ್ನುವ ದೃಶ್ಯ ಹುಲಿಗಳ ದರ್ಬಾರ್ ದೃಶ್ಯ ಕಂಡಿದ್ದಾರೆ.
ರಸ್ತೆಯಲ್ಲಿ ರಾಜ ಗಾಂಭೀರ್ಯದಲ್ಲಿ ನಡೆದುಕೊಂಡು ಬರುತ್ತಿರುವ ವ್ಯಾಘ್ರನನ್ನು ಕಂಡು ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw