ರಷ್ಯಾ-ಉಕ್ರೇನ್ ನಡುವಿನ ಯುದ್ಧಕ್ಕೆ ಮೂರು ವರ್ಷ: ಸಾಮಾನ್ಯ ಸಭೆಯಲ್ಲಿ ನಾಟಕೀಯ ಬೆಳವಣಿಗೆ

ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಶಾಂತಿ ಸ್ಥಾಪಿಸುವ ವಿಷಯ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮತದಾನಕ್ಕೆ ಬಂದಿತ್ತು. ಇದು ನಾಟಕೀಯ ಬೆಳವಣಿಗೆಗೆ ಕಾರಣವಾಯಿತು. ಉಕ್ರೇನ್ ಮೇಲಿನ ದಾಳಿಗೆ ರಷ್ಯಾವನ್ನು ದೂಷಿಸಲು ನಿರಾಕರಿಸಿದ ಡೊನಾಲ್ಡ್ ಟ್ರಂಪ್ ಆಡಳಿತ, ಈ ಹಿಂದೆ ಬೈಡೆನ್ ಆಡಳಿತದಲ್ಲಿ ರಷ್ಯಾ ವಿರುದ್ದ ನೀಡಿದ್ದ ಹೇಳಿಕೆಯನ್ನು ಹಿಂಪಡೆಯಿತು.ಶಾಂತಿಯುತ ಪರಿಹಾರವನ್ನು ಕೋರುವ ಪ್ರತ್ಯೇಕ ನಿರ್ಣಯದಿಂದ ಭಾರತ ಮತ್ತು ಚೀನಾ ದೂರ ಉಳಿದವು.
ವರದಿಗಳ ಪ್ರಕಾರ, ರಷ್ಯಾಗೆ ಪೂರಕವಾದ ರೀತಿಯಲ್ಲಿ ಯುದ್ಧ ಕೊನೆಗೊಳಿಸಲು ಅಮೆರಿಕ ಮುಂದಾಗಿದೆ. ಉಕ್ರೇನ್ ಹೊರಗಿಟ್ಟು ರಷ್ಯಾ ಜೊತೆ ಮಾತ್ರ ಚರ್ಚಿಸಿ ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳುತ್ತಿದೆ. ಇದಕ್ಕೆ ಯುರೋಪಿಯನ್ ಒಕ್ಕೂಟದ ಅದರ ಮಿತ್ರ ರಾಷ್ಟ್ರಗಳೇ ವಿರೋಧ ವ್ಯಕ್ತಪಡಿಸಿವೆ.
ಸೋಮವಾರ ವಿಶ್ವಸಂಸ್ಥೆಯಲ್ಲಿ, ಅಮೆರಿಕ ಮತ್ತು ರಷ್ಯಾ ಎರಡೂ ಯುರೋಪಿಯನ್ ಒಕ್ಕೂಟ ಬೆಂಬಲಿತ ನಿರ್ಣಯವನ್ನು ವಿರೋಧಿಸಿದವು. ಏಕೆಂದರೆ, ಆ ನಿರ್ಣಯದಲ್ಲಿ ಉಕ್ರೇನ್ ಮೇಲಿನ ದಾಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ನೇರವಾಗಿ ದೂಷಿಸಲಾಗಿದೆ.
ಉದ್ವಿಗ್ನತೆ ಕಡಿಮೆ ಮಾಡಲು, ಬೇಗನೆ ಕದನ ವಿರಾಮವನ್ನು ಘೋಷಿಸಲು ಮತ್ತು ಯುದ್ಧಕ್ಕೆ ಶಾಂತಿಯುತ ಪರಿಹಾರವನ್ನು ಕೋರುವ ಪ್ರತ್ಯೇಕ ನಿರ್ಣಯದಿಂದ ಭಾರತ ಮತ್ತು ಚೀನಾ ದೂರ ಉಳಿದವು.
ಭಾರತ ಮತ್ತು ಚೀನಾ ಜೊತೆಗೆ, ಬ್ರೆಝಿಲ್, ಇರಾನ್, ಇರಾಕ್, ಪಾಕಿಸ್ತಾನ, ಬಾಂಗ್ಲಾದೇಶ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಯುಎಇ, ವಿಯೆಟ್ನಾಂ ಸೇರಿದಂತೆ 65 ಯುಎನ್ ಸದಸ್ಯ ರಾಷ್ಟ್ರಗಳು ನಿರ್ಣಯದಿಂದ ದೂರ ಉಳಿದವು.
ರಷ್ಯಾವನ್ನು ದೂಷಿಸುವ ನಿರ್ಣಯವನ್ನು ಅಮೆರಿಕ ಮತ್ತು ರಷ್ಯಾ ವಿರೋಧಿಸಿದ ಬಳಿಕ, ಜಿ-7 ರಾಷ್ಟ್ರಗಳು ನಿರ್ಣಯ ತೆಗೆದುಕೊಳ್ಳಲು ಹೆಣಗಾಡಿದವು. ಅದರ ಪರಿಣಾಮವಾಗಿ ತಟಸ್ಥ ನಿಲುವು ಅನುಸರಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj