ಗುಜರಾತ್ ಮಾಡೆಲ್: ತ್ಯಾಜ್ಯ ಸಂಗ್ರಹಿಸುವ ವಾಹನದಲ್ಲಿ ವೆಂಟಿಲೇಟರ್ ಸಾಗಾಟ!

ventilator
06/04/2021

ಗುಜರಾತ್: ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ಕೇಳಿ ಬರುತ್ತಿರುವ ‘ಗುಜರಾತ್ ಮಾಡೆಲ್’ ಎಂಬ ಪದವನ್ನು ಕೇಳಿ  ಜನರು ಅಚ್ಚರಿ ಪಟ್ಟದ್ದೇ ಬಂತು. ಆದರೆ ಗುಜರಾತ್ ಮಾಡೆಲ್ ಅಂದ್ರೆ ಏನು ಎನ್ನುವುದನ್ನು ಈ ಸುದ್ದಿ ಓದಿದರೆ ತಿಳಿಯಬಹುದು.

ಗುಜರಾತ್ ನಲ್ಲಿ ವೆಂಟಿಲೇಟರ್ ಗಳನ್ನು ಆಸ್ಪತ್ರೆಗೆ ತ್ಯಾಜ್ಯಗಳನ್ನು ಸಾಗಿಸುವ ವಾಹನದಲ್ಲಿ ಸಾಗಿಸಲಾಗಿದ್ದು, ಗುಜರಾತ್ ಸರ್ಕಾರವು ವೆಂಟಿಲೇಟರ್ ಗಳನ್ನು ವಲ್ಸಾದ್ ನಿಂದ ಸೂರತ್ ಗೆ ಸಾಗಿಸಲು ಆದೇಶಿಸಿತ್ತು. ಈ ಆದೇಶವನ್ನು  ಅನುಸರಿಸಿ, ಸೂರತ್ ಮಹಾನಗರ ಪಾಲಿಕೆಯೂ ವಲ್ಸಾದ್‌ನಿಂದ ವೆಂಟಿಲೇಟರ್‌ಗಳನ್ನು ತರಲು ಕಸದ ಟ್ರಕ್ ಕಳುಹಿಸಿಕೊಟ್ಟಿದೆ.  ಸೂರತ್ ನಗರ ಪಾಲಿಕೆಯು ತ್ಯಾಜ್ಯ ವಿಲೇವಾರಿ ಟ್ರಕ್‌ನಲ್ಲಿ ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿರುವ ಬಗ್ಗೆ ತಮಗೆ ಮಾಹಿತಿ ಬಂದಿದೆ ಎಂದು ವಲ್ಸದ್ ಡಿಸಿ ಆರ್ ಆರ್ ರಾವಲ್ ತಿಳಿಸಿದ್ದಾರೆ.

ಗುಜರಾತ್ ಮಾಡೆಲ್ ನಲ್ಲಿ ವೈದ್ಯಕೀಯ ಸಲಕರಣೆಗಳನ್ನು ತ್ಯಾಜ್ಯ ಸಾಗಿಸುವ ವಾಹನದಲ್ಲಿಯೇ ಸಾಗಿಸಲಾಗುತ್ತಿದೆ. ಇದೆಂತಹಾ ಸ್ಥಿತಿ ಹಾಗಾದರೆ ಗುಜರಾತ್ ರಾಜ್ಯ ಯಾವ ರೀತಿಯಲ್ಲಿರ ಬಹುದು ಎಂಬ ಚರ್ಚೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ

Exit mobile version