**ಕಾ ಉತ್ಸವ್(“Tika ustav”) ಸರ್ಕಾರದ ಮತ್ತೊಂದು ಮೋಸ | ರಾಹುಲ್ ಗಾಂಧಿ - Mahanayaka
12:41 AM Wednesday 5 - February 2025

**ಕಾ ಉತ್ಸವ್(“Tika ustav”) ಸರ್ಕಾರದ ಮತ್ತೊಂದು ಮೋಸ | ರಾಹುಲ್ ಗಾಂಧಿ

rahul gandhi
15/04/2021

ನವದೆಹಲಿ: **ಕಾ ಉತ್ಸವ್(“Tika ustav”) ಸರ್ಕಾರದ ಮತ್ತೊಂದು ಮೋಸ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್,  ಕೊವಿಡ್ ಪರಿಸ್ಥಿತಿಗಳನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದ ಕೇಂದ್ರ ಸರ್ಕಾರವು **ಕಾ ಉತ್ಸವ್ ಮಾಡುತ್ತಿದೆ. ಇದು ಸರ್ಕಾರದ ಇನ್ನೊಂದು ಮೋಸ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ, ವೆಂಟಿಲೇಟರ್ ಗಳು ಅಥವಾ ಯಾವುದೇ ಲಸಿಕೆಗಳು ಲಭ್ಯವಿಲ್ಲ.  ಆಮ್ಲಜನಕ ವ್ಯವಸ್ಥೆಗಳಿಲ್ಲ. ಪಿಎಂ ಕೇರ್ಸ್ ಗೆ ಕೊರೊನಾ ಪರಿಸ್ಥಿತಿ ನಿಭಾಯಿಸಲು ಭಾರೀ ಪ್ರಮಾಣದ ನಿಧಿ ಸಂಗ್ರಹವಾಗಿದ್ದರೂ ಅದನ್ನು ವಿನಿಯೋಗಿಸದೇ ಸರ್ಕಾರ ಏನು ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಇತ್ತೀಚಿನ ಸುದ್ದಿ